janadhvani

Kannada Online News Paper

ಒಮಾನ್ ಕೆಸಿಎಫ್ ಸಮಿತಿಗಳಲ್ಲಿ ಸುಳ್ಯದವರ ಸಾರಥ್ಯ

ಒಮಾನ್: ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಒಮಾನ್ ರಾಷ್ಟ್ರೀಯ ಸಮಿತಿಗೆ ಮತ್ತು ಸಲಾಲ, ಮಸ್ಕತ್ ಹಾಗೂ ಸೊಹಾರ್ ಸಮಿತಿಗೆ ಸುಳ್ಯದ ಹಲವು ಮಂದಿ ಆಯ್ಕೆಗೊಂಡಿದ್ದಾರೆ.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಮೊಗರ್ಪಣೆ, ರಾಷ್ಟ್ರೀಯ ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ಭಾರತ್, ರಾಷ್ಟ್ರೀಯ ಆಡಳಿತ ವಿಭಾಗದ ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಂಬ್ಳಿ ಆಯ್ಕೆಗೊಂಡಿರುತ್ತಾರೆ.
ಸೊಹಾರ್ ಝೋನ್ ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಶಫೀಕ್(ಕೆಎಸ್ಎಮ್) ಎಲಿಮಲೆ ಇವರು ಅಯ್ಕೆಗೊಂಡಿದ್ದಾರೆ.

ಸಲಾಲ ಝೋನ್ ಅಧ್ಯಕ್ಷ ಅಬ್ದುಲ್ ಲತೀಫ್ ಕುತ್ತಮೊಟ್ಟೆ,(ಬೋರುಗುಡ್ಡೆ)ಕೋಶಾಧಿಕಾರಿಯಾಗಿ ಬಶೀರ್ ಅಡ್ಕಾರ್, ಸಂಘಟನಾ ಅಧ್ಯಕ್ಷರಾಗಿ ಅಬ್ದಲ್ ಕಯ್ಯೂಂ ಅಡ್ಕಾರ್, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸುಳ್ಯ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಬೀರ್ ಕುತ್ತಮೊಟ್ಟೆ(ನಾವೂರು), ಇಹ್ಸಾನ್ ಅಧ್ಯಕ್ಷರಾಗಿ ಕಮಾಲ್ ಜಯನಗರ, ಎಕ್ಸ್ ಕ್ಯೂಟಿವ್ ನಿರ್ದೇಶಕರಾಗಿ ಹನೀಫ್ ಹಳೆಗೇಟು, ಹಮೀದ್ ಪೈಚಾರು ಆಯ್ಕೆಗೊಂಡಿದ್ದಾರೆ.
ಮಸ್ಕತ್ ಝೋನ್ ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಮರಕ್ಕಡ ಎಣ್ಮೂರು ಇವರುಗಳು ಅಯ್ಕೆಗೊಂಡಿದ್ದಾರೆ.

ವರದಿ: ಕಬೀರ್ ಜಟ್ಟಿಪ್ಪಳ್ಳ

error: Content is protected !! Not allowed copy content from janadhvani.com