janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


SYS & SSF ಅಜ್ಜಿನಡ್ಕ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 12 ಆದಿತ್ಯವಾರ ದಂದು ಸ್ವರ್ಗದ ಕದ ತಟ್ಟೋಣ ಎಂಬ ಅಭಿಯಾನದಡಿಯಲ್ಲಿ ರಮಳಾನಿನ ಒಂದು ದಿನದ ಕಾರ್ಯಕ್ರಮವನ್ನು ನಡೆಸಲಾಯಿತು.

ಫಜ್ರ್ ನಮಾಝಿನ ಬಳಿಕ ಖತಮುಲ್ ಕುರಾನ್ ಪಾರಾಯಣವು ಅಜ್ಜಿನಡ್ಕಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ನಡೆಯಿತು. 7:30 ಕ್ಕೆ SYS SSF ಕಛೇರಿಯಲ್ಲಿ ಬರ್ದಾಃ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಅಸರ್ ನಮಾಝಿನ ಬಳಿಕ ಕಛೇರಿಯಲ್ಲಿ ಮಾಸಿಕ ನಾರಿಯತ್ ಸ್ವಲಾತ್ ಹಾಗೂ ಕಿಟ್ ವಿತರಣೆ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಹು: ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಉಸ್ತಾದ್ ರವರು ಹಿತವಚನವನ್ನು ನೀಡಿ ದುಆ ಆಶೀರ್ವಾದ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಲವಾರು SYS &SSF ನ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಲೀಮ್ ಅಜ್ಜಿನಡ್ಕ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಹಫೀಫ್ ರವರು ಧನ್ಯವಾದವಿತ್ತರು.

error: Content is protected !! Not allowed copy content from janadhvani.com