ಎಸ್.ಎಸ್.ಎಫ್ ಸುಳ್ಯ ಡಿವಿಷನ್; ದಅವಾ ಕಾನ್ಫರೆನ್ಸ್

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ವತಿಯಿಂದ ಗಾಂಧಿನಗರ ಸುನ್ನೀ ಸೆಂಟರಿನಲ್ಲಿ ಡಿವಿಷನ್ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಂಜದಿಯವರ ಅಧ್ಯಕ್ಷತೆಯಲ್ಲಿ ಮುತಅಲ್ಲಿಂ ವಿದ್ಯಾರ್ಥಿಗಳಿಗಾಗಿ ದಅವಾ ಕಾನ್ಫರೆನ್ಸ್ ನಡೆಯಿತು.

ಎಸ್.ಎಸ್.ಎಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿಲ್ಲಾ ದಅವಾ ಕನ್ವೀನರ್ ಮುನೀರ್ ಸಖಾಫಿ ಉಳ್ಳಾಲ ತರಬೇತಿ ನೀಡಿದರು. ಡಿವಿಷನ್ ದಅವಾ ಕನ್ವೀನರ್ ಅಬ್ದುಲ್ ಕಲಾಂ ಝುಹ್ರಿ ಬೆಳ್ಳಾರೆ ಉದ್ಘಾಟಿಸಿದರು. ಈ ವರ್ಷ ಪದವೀಧರರಾಗಿ ವಿವಿಧ ಕಾಲೇಜುಗಳಿಂದ ಸೇವಾರಂಗಕ್ಕಿಳಿದ ತಾಲೂಕಿನ ಯುವ ವಿದ್ವಾಂಸರನ್ನು ಅಭಿನಂದಿಸಲಾಯಿತು.

ಎಸ್.ಎಸ್.ಎಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಫೈಝಲ್ ಝುಹ್ರಿ ಕಲ್ಲುಗುಂಡಿ, ಕೆ.ಸಿ.ಎಫ್ ಅಬುಧಾಬಿ ಘಟಕದ ಅಧ್ಯಕ್ಷರಾದ ಹಸೈನಾರ್ ಅಮಾನಿ, ಡಿವಿಷನ್ ಮಾಜಿ ಅಧ್ಯಕ್ಷರಾದ ಅಶ್ರಫ್ ಸಖಾಫಿ ಕುಂಬಕ್ಕೋಡು, ಡಿವಿಷನ್ ಪ್ರಧಾನ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ಶುಭ ಹಾರೈಸಿ ಮಾತನಾಡಿದರು. ದಅವಾ ಸಮಿತಿ ಚೆಯರ್ಮೇನ್ ಮುಖ್ತಾರ್ ಮೇನಾಲ ಅಭಿನಂದನಾ ಭಾಷಣ ನಡೆಸಿದರು. ಎಸ್.ವೈ.ಎಸ್ ನಾಯಕರಾದ ಸಿದ್ದೀಖ್ ಕಟ್ಟೆಕ್ಕಾರ್ಸ್, ಡಿವಿಷನ್ ಉಪಾಧ್ಯಕ್ಷ ಸಿದ್ದೀಖ್ ಗೂನಡ್ಕ, ಕೋಶಾಧಿಕಾರಿ ಹಸೈನಾರ್ ನೆಕ್ಕಿಲ, ರೈಟ್ ಟೀಂ ಕನ್ವೀನರ್ ಜಬ್ಬಾರ್ ಹನೀಫಿ ನಿಂತಿಕಲ್ಲು ಮುಖ್ಯಾತಿಥಿಗಳಾಗಿ ಭಾಗವಹಿಸಿದರು.

ದಅವಾ ಸಮಿತಿ ಕನ್ವೀನರ್ ಸ್ವಾದಿಖ್ ಹಿಮಮಿ ಸ್ವಾಗತಿಸಿ, ಸಾಬಿತ್ ಪಾಣಾಜೆ ವಂದಿಸಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!