janadhvani

Kannada Online News Paper

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ : ಒಫೀಶಿನಾ -19 ಲೀಡರ್‌ಶಿಫ್ ಟ್ರೈನಿಂಗ್ ಕ್ಯಾಂಪ್

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಡಿವಿಶನ್ ಹಾಗೂ ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನಾಯಕತ್ವ ತರಬೇತಿ ಶಿಬಿರ “ಒಫೀಶಿನಾ-19” ಕ್ಯಾಂಪ್ ಮುಡಿಪು ಗೌಸಿಯ ಮಸ್ಜಿದ್ ಸಭಾಂಗಣದಲ್ಲಿ ನಡೆಯಿತು. ಡಿವಿಶನ್ ಅಧ್ಯಕ್ಷರಾದ
ತೌಸೀಫ್ ಸಅದಿ ಹರೇಕಳರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಿವಿಶನ್ ಉಪಾಧ್ಯಕ್ಷರಾದ ಸಿದ್ದೀಕ್ ಸಖಾಫಿ ಕಾಯಾರ್ ಉದ್ಘಾಟಿಸಿದರು. ಡಿವಿಶನ್ ಉಪಾಧ್ಯಕ್ಷ ಇಬ್ರಾಹಿಂ ಆಹ್ಸನಿ ಮಂಜನಾಡಿ ಪ್ರಾರ್ಥನೆಗೆ ನೇತೃತ್ವ ನೀಡಿದರು.ಎಸ್. ವೈ. ಎಸ್ ರಾಜ್ಯ ನಾಯಕರಾದ ಉಮರ್ ಸಖಾಫಿ ಎಡಪ್ಪಾಲ್ ಮತ್ತು ಮನ್ಸೂರ್ ಹಿಮಮಿ ಮೊಂಟೆಪದವು ನಾಯಕತ್ವ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿವಿಶನ್ ಕೋಶಾಧಿಕಾರಿ ಶರೀಫ್ ಮುಡಿಪು, ಕಾರ್ಯದರ್ಶಿಗಳಾದ ನೌಫಲ್ ಫರೀದ್ ನಗರ, ಮೊಯ್ದಿನ್ ಮೋರ್ಲ, ಕ್ಯಾಂಪಸ್ ಕಾರ್ಯದರ್ಶಿ ಅಬೂಸಾಲಿಹ್ ಹರೇಕಳ ಸೇರಿದಂತೆ ಡಿವಿಶನ್ ನ ಎಲ್ಲಾ ಕಾಯ೯ಕಾರಿ ಸಮಿತಿ ಸದಸ್ಯರು ಹಾಗೂ ಸೆಕ್ಟರ್‌ಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದರು.

ಡಿವಿಷನ್ ಪ್ರ‌ಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com