ಉಜಿರೆ: SSF ಉಜಿರೆ ಯುನಿಟ್ ನ ವತಿಯಿಂದ ಇರ್ಷಾದಿಯ್ಯ ಕ್ಯಾಂಪ್ ಹಾಗೂ ರಮಳಾನ್ ಪೂರ್ವ ಸಿದ್ದತಾ ತರಗತಿ ಯು ದಿನಾಂಕ 03.05.2019ನೇ ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದರಸ ಹಳೆಪೇಟೆ ಉಜಿರೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಯುನಿಟ್ ನ ಅಧ್ಯಕ್ಷರಾದ ಶಫೀಕ್ ಉಜಿರೆ ಯವರು ವಹಿಸಿದ್ದರು.ತರಗತಿಯನ್ನು ಶಾಹುಲ್ ಹಮೀದ್ ಮುಈನಿ ಉಜಿರೆಯವರು ನಡೆಸಿದರು.
ಕಾರ್ಯಮದಲ್ಲಿ SSLC ಹಾಗೂ ದ್ವಿತೀಯ PUCಯಲ್ಲಿ ಡಿಸ್ಟಿಂಷನ್ ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M ಕೋಯ ತಂಙಳ್, SYS ಉಜಿರೆ ಸೆಂಟರ್ ಹಿಸಾಬ ಅಮೀರ್ ಅಶ್ರಪ್ KCF, SSF/SYS UJIRE GULF ಗ್ರೂಪ್ ಸದಸ್ಯರಾದ ಬಶೀರ್ ಅತ್ತಾಜೆ, ಮೊಯಿದಿಚ್ಚ ದುಬೈ, ಹಾರಿಸ್ AtoZ , ಅಶ್ರಫ್ MH, ಮುಸ್ತಫಾ medical, ಯುನಿಟ್ ಕಾರ್ಯದರ್ಶಿ ಸಲ್ಮಾನ್ SA, ಕಲಂದರ್ ಅತ್ತಾಜೆ, ಶರ್ವಾನ್ ಕಕ್ಕೆಜಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
SSF ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವರದಿ: ಎಂ.ಎಂ.ಉಜಿರೆ