janadhvani

Kannada Online News Paper

ಕೋಝಿಕ್ಕೋಡ್: ಕರಿಪ್ಪೂರ್‌ನಿಂದ ಜಿದ್ದಾಗೆ ಹೊರಡಲಿರುವ ಸ್ಪೈಸ್ ಜೆಟ್‌ನ ವಿಮಾನ ಸರ್ವೀಸ್‌ಗಳು ಏ.20 ರಂದು ಪ್ರಾರಂಭಗೊಂಡಿದೆ.

ಬೆಳಗ್ಗೆ 5:35ಕ್ಕೆ ಕರಿಪ್ಪೂರ್‌ನಿಂದ ಹೊರಟು 8:25ಕ್ಕೆ ಜಿದ್ದಾ ತಲುಪಲಿದೆ. ಅದೇ ರೀತಿ 9:45ಕ್ಕೆ ಜಿದ್ದಾದಿಂದ ಹೊರಟು ಸಾಯಂಕಾಲ 6:05ಕ್ಕೆ ಕರಿಪ್ಪೂರ್‌ಗೂ ತಲುಪಲಿದ್ದು, ಇದೇ ವಿಮಾನ ಅಲ್ಲಿಂದ 7:45 ಬೆಂಗಳೂರಿಗೆ ತೆರಲಿ ಅಲ್ಲಿಂದ 9:35ಕ್ಕೆ ಹೊರಟು 10:45ಕ್ಕೆ ಮರಳಿ ಕರಿಪ್ಪೂರ್ ತಲುಪಲಿದೆ.

ಪ್ರಸಕ್ತ ಸೌದಿ ಏರ್‌ವೇಸ್ ಮಾತ್ರ ಕರಿಪ್ಪೂರ್‌ನಿಂದ ಸರ್ವೀಸ್ ನಡೆಸುತ್ತಿದ್ದು, ಹೆಚ್ಚಿನ ಯಾತ್ರಿಕರು ಕನೆಕ್ಷನ್ ವಿಮಾನ ಮೂಲಕ ಜಿದ್ದಾ ತಲುಪುವವರಾಗಿದ್ದಾರೆ.ಸ್ಪೈಸ್ ಜೆಟ್ ನ ಸೇವೆಯು ಜಿದ್ದಾ ಪ್ರಯಾಣಿಕರಿಗೆ ನೆಮ್ಮದಿ ನೀಡಲಿದೆ. ಜೆಟ್ ಏರ್‌ವೇಸ್ ನ ಟಿಕೆಟ್ ಬುಕ್ಕಿಂಗನ್ನು ಒಂದು ತಿಂಗಳ ಹಿಂದೆ ಪ್ರಾರಂಭಿಸಲಾಗಿತ್ತು.

ಪ್ರಾರಂಭದಲ್ಲಿ 13,150 ಟಿಕೆಟ್ ದರವನ್ನು ನಿಗದಿ ಪಡಿಸಲಾಗಿತ್ತು. 187 ಆಸನಗಳುಳ್ಳ ವಿಮಾನವನ್ನು ಜೆಟ್ ಉಪಯೋಗಿಸಲಿದೆ. ರನ್‌ವೇ ನವೀಕರಣದ ಭಾಗವಾಗಿ ದೊಡ್ಡಗಾತ್ರದ ವಿಮಾನಗಳಿಗೆ ನಿಷೇಧ ಹೇರಲಾದ ಕಾರಣ ಜಿದ್ದಾ ಸೇವೆಯನ್ನು ಮೊಟಕುಗೊಳಿಸಲಾಗಿತ್ತು. ಕರಿಪ್ಪೂರ್‌ನಿಂದ ದೊಡ್ಡ ವಿಮಾನ ಮೂಲಕ ಜಿದ್ದಾಗೆ ಹಾರಾಟ ನಡೆಸಲು ಏರ್ ಇಂಡಿಯಾ ಅನುಮತಿ ಕೊರಿ ಕಾಯುತ್ತಿದ್ದು, ಶೀಘ್ರದಲ್ಲೇ ಏರ್ ಇಂಡಿಯಾ ಗೂ ಅನುಮತಿ ಲಭಿಸಲಿದೆ ಎಂದು ನಿರೀಕ್ಷಿಸಲಾಗಿದೆ.

error: Content is protected !! Not allowed copy content from janadhvani.com