ಶಿವಮೊಗ್ಗ: ನರೇಂದ್ರ ಮೋದಿಯಂತ ದಕ್ಷ ಶಕ್ತಿಶಾಲಿ ಪ್ರಧಾನ ಮಂತ್ರಿಯ ಅವಶ್ಯಕತೆ ದೇಶಕ್ಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಬೆಕ್ಕಿನ ಕಲ್ಮಠದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಚಾರ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಬೇಕಾದ್ರೆ ಬಿ.ವೈ. ರಾಘವೇಂದ್ರ ಗೆಲ್ಲಬೇಕು ಎಂದರು.
ಪ್ರಧಾನಿ ಹುದ್ದೆಯ ಬಗ್ಗೆ ಘನತೆ ಇರಬೇಕು. ಕೆಲವರಿಗೆ ಅದು ಇಲ್ಲ. ಪ್ರಧಾನಿ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ. ಅವರ ವ್ಯಕ್ತಿತ್ವವನ್ನು ಇದು ತೋರಿಸುತ್ತದೆ. ಇದರಿಂದ ನರೇಂದ್ರ ಮೋದಿಗೆ ಏನೂ ಆಗಲ್ಲ. ಟೀಕೆ ಮಾಡುವವರ ವ್ಯಕ್ತಿತ್ವ ಹೋಗುತ್ತದೆ ಎಂದು ಕೃಷ್ಣ ಟಾಂಗ್ ನೀಡಿದರು.