janadhvani

Kannada Online News Paper

ಇಂಡಿಯನ್ ಗ್ರಾಂಡ್ ಮುಫ್ತಿ: ಏ.19 ಕ್ಕೆ ಯುಎಇ ಯಲ್ಲಿ ಭವ್ಯ ಪುರಸ್ಕಾರ ಸಮಾರಂಭ

ಅಬುಧಾಬಿ: ಇಂಡಿಯನ್ ಗ್ರಾಂಡ್ ಮುಫ್ತಿಯಾಗಿ ಆಯ್ಕೆಗೊಂಡ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರಿಗೆ ಯುಎಇಯ ಅನಿವಾಸಿ ಕುಟುಂಬದ ವತಿಯಿಂದ ಭವ್ಯ ಸ್ವಾಗತ ಕಾರ್ಯಕ್ರಮವು ಎ.19ರಂದು ಅಬುಧಾಬಿಯ ಸಿಟಿ ಗೋಲ್ಫ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.

ಗ್ರಾಂಡ್ ಮುಫ್ತಿಯಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿಗೆ ಯುಎಇಗೆ ಆಗಮಿಸುವ ಉಸ್ತಾದರಿಗೆ, ಅವರ ಪ್ರಧಾನ ಕಾರ್ಯಾಚರಣಾ ವಲಯವಾದ ಯುಎಇಯಲ್ಲಿ ನೀಡಲ್ಪಡುವ ಬೃಹತ್ ಕಾರ್ಯಕ್ರಮವಾಗಲಿದೆ ಈ ಸಮಾರಂಭ.

ಕಾರ್ಯಕ್ರಮದಲ್ಲಿ ಯುಎಇಯ ಉನ್ನತ ಆಡಳಿತಾಧಿಕಾರಿಗಳು, ಆರ್ಥಿಕ, ಸಾಂಸ್ಕೃತಿಕ ವಲಯದ ಪ್ರಮುಖರು, ಇನ್ನಿತರ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗಾಗಿ ಉನ್ನತ ಮಟ್ಟದ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದೆ.

error: Content is protected !! Not allowed copy content from janadhvani.com