janadhvani

Kannada Online News Paper

ಅಮೆರಿಕಾ ಅಂತಾರಾಷ್ಟ್ರ ರೋಬೋಟಿಕ್ ಸ್ಪರ್ಧೆಯಲ್ಲಿ ಮರ್ಕಝ್ ವಿದ್ಯಾರ್ಥಿಗಳು

ಕೋಝಿಕ್ಕೋಡ್: ಮುಂದಿನ ತಿಂಗಳು ಅಮೆರಿಕದ ಮಿಶಿಗಣ್ ನ ಲಾರೆನ್ಸ್ ಟೆಕ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಇಂಟರ್ ನ್ಯಾಷನಲ್ ರೋಬೋಟಿಕ್ ಸ್ಪರ್ಧೆಯಲ್ಲಿ ಕೋಝಿಕ್ಕೋಡ್ ಪೂನೂರಿನ ಮರ್ಕಝ್ ಗಾರ್ಡನ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಈ ತಿಂಗಳ 7ರಂದು ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ನ್ಯಾಷನಲ್ ರೋಬೋಟಿಕ್ಸ್ ಸ್ಪರ್ಧೆಯಲ್ಲಿ ಮರ್ಕಝ್ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಿದ್ದು ಆ ಮೂಲಕ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಮಲಪ್ಪುರಂ ಮಕರಪ್ಪರಂಬು ಅಬ್ದುಲ್ ಅಝೀಝ್ ಮತ್ತು ನಸೀಮಾ ದಂಪತಿ ಪುತ್ರ ಮುಹಮ್ಮದ್ ಯಹ್ಯಾ, ಪಟ್ಟಾಂಬಿ ಕೊಂಡೂರ್ಕಾರತ್ತೊಡಿ ಅಬೂಬಕರ್ ಸಿದ್ದೀಖ್, ಸಜ್ನಾ ದಂಪತಿ ಪುತ್ರ ನಾಹಿದ್ ಆಯ್ಕೆಯಾಗಿದ್ದಾರೆ.

ಇವರಿಗೆ ಕೋಝಿಕ್ಕೋಡ್ ಸ್ಮಾರ್ಟ್ ರೋಬೋಟಿಕ್ಸ್ ತಂಡವು ತರಬೇತಿಯನ್ನು ನೀಡಿದೆ. ವಿದ್ಯಾರ್ಥಿಗಳನ್ನು ಮರ್ಕಝ್‌ನ ನಿರ್ದೇಶಕ ಡಾ. ಎ .ಪಿ. ಮುಹಮದ್ ಅಬ್ದುಲ್ ಹಕೀಮ್ ಅಝ್ಹರಿ, ಅಕಾಡೆಮಿಕ್ ಮೆಂಡರ್ ಡಾ. ಅಬ್ದುಲ್ ಸಲಾಮ್, ಮ್ಯಾನೇಜರ್ ಅಬೂಸ್ವಾಲಿಹ್ ಸಖಾಫಿ ಮತ್ತು ಪ್ರಿನ್ಸಿಪಾಲ್ ನೌಫಲ್ ಹಸನ್ ನೂರಾನಿ ಪಳ್ಳಿಕ್ಕಲ್ ಅಭಿನಂದಿಸಿದ್ದಾರೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!