janadhvani

Kannada Online News Paper

ಪಾಸ್ ಪೋರ್ಟ್ ನಲ್ಲಿ ಇಖಾಮಾ ಸ್ಟಿಕ್ಕರ್‌ಗೆ ಬದಲು ಸಿವಿಲ್ ಐಡಿ ಕಾರ್ಡ್ ‌ವಿಧಾನ ಯಶಸ್ವಿ

ಕುವೈತ್ ಸಿಟಿ: ಪಾಸ್ ಪೋರ್ಟ್ ನಲ್ಲಿ ಇಖಾಮಾ ಸ್ಟಿಕ್ಕರ್‌ಗೆ ಬದಲಾಗಿ ಸಿವಿಲ್ ಐಡಿ ಕಾರ್ಡ್‌ನಲ್ಲಿ ಸಂಪೂರ್ಣ ಇಖಾಮಾ ವಿವರಗವನ್ನು ನೀಡುವ ವಿಧಾನವನ್ನು ಕಳೆದ ತಿಂಗಳಿಂದ ಸಂಬಂಧಿಸಿದ ಇಲಾಖೆ ಜಾರಿಗೆ ತಂದಿದೆ. ಹೊಸ ಕಾರ್ಯವಿಧಾನವನ್ನು ಪರಿಶೀಲಿಸಿದ ನಂತರ, ಗೃಹ ವ್ಯವಹಾರಗಳ ಸಚಿವಾಲಯ ಈ ವ್ಯವಸ್ಥೆಯು ಪರಿಣಾಮಕಾರಿಯಾಗಿದೆ ಎಂದಿದೆ.

ವಲಸೆಯ ಪ್ರಕ್ರಿಯೆಗಳಿಗೆ ಸಿವಿಲ್ ಐಡಿ ಕಡ್ಡಾಯಗೊಳಿಸಿರುವ ಕಾರಣ ಆರಂಭದಲ್ಲಿ ಸಣ್ಣಪುಟ್ಟ ಗೊಂದಲ ಉಂಟಾಯಿತಾದರೂ, ಅಧಿಕಾರಿಗಳು ಆ ಬಗ್ಗೆ ಅರಿವು ಮೂಡಿಸಿದ್ದು ಪರಿಣಾಮಕಾರಿಯಾಯ್ತು. ಹೊಸ ವ್ಯವಸ್ಥೆಯು ಅನಿವಾಸಿಗಳಿಗೆ ಸಮ್ಮತಿದಾಯಕವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಮಧ್ಯೆ, ವಿದೇಶಿ ವಿಮಾನ ನಿಲ್ದಾಣಗಳಲ್ಲಿ ವಲಸೆ ಅಧಿಕಾರಿಗಳಿಗೂ ಸೇರಿದಂತೆ, ಹೊಸ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುವ ನಿರ್ದೇಶನ ಕೂಡ ಕೇಳಿಬಂದಿದೆ. ಕುವೈತ್‌ಗೆ ಬರುವವರು ತಮ್ಮ ದೇಶದ ವಿಮಾನ ನಿಲ್ದಾಣಗಳಲ್ಲಿ ಇಖಾಮಾ ಪುಟಕ್ಕೆ ಬದಲಾಗಿ ಸಿವಿಲ್ ಐಡಿಯನ್ನು ತೋರಿಸಬೇಕಾಗುತ್ತದೆ. ದೇಶದಲ್ಲಿನ ವಿದೇಶಿ ದೂತವಾಸಗಳೊಂದಿಗೆ ಸಂವಹನ ನಡೆಸಿದ ನಂತರ ಗೃಹ ಸಚಿವಾಲಯವು ಇದನ್ನು ಅನುಷ್ಠಾನ ಗೊಳಿಸಿದೆ.

error: Content is protected !! Not allowed copy content from janadhvani.com