janadhvani

Kannada Online News Paper

ವಿವಿಪ್ಯಾಟ್ ಸ್ಲಿಪ್ ಪರಿಶೀಲನೆ: ಚುನಾವಣೆ ಫಲಿತಾಂಶ ವಿಳಂಬವಾಗಲಿದೆ-ಚು.ಆಯೋಗ

ನವದೆಹಲಿ: ವಿವಿಪ್ಯಾಟ್ ಪ್ರತಿಗಳನ್ನು ಶೇ 50 ರವರೆಗೆ ಹೆಚ್ಚಿಸಿದ್ದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಗೆ ಆರು ದಿನ ತಡವಾಗಲಿದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ 50 ಪುಟಗಳ ಅಫಿಡವಿಟ್ ನಲ್ಲಿ ವಿವಿಪ್ಯಾಟ್ ಪ್ರತಿಗಳ ಸಂಖ್ಯೆಯನ್ನು ಶೇ 50 ರವರೆಗೆ ಹೆಚ್ಚಿಸಿದ್ದಲ್ಲಿ ಫಲಿಶಾಂಶ ಘೋಷಣೆ 6 ದಿನ ತಡವಾಗಲಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಮ್) -VVPAT ನಿಖರತೆಯಲ್ಲಿನ ಪ್ರಸ್ತುತ ವಿಶ್ವಾಸ ಮಟ್ಟ 99.9936%.ರಷ್ಟಿದೆ ಎನ್ನಲಾಗಿದೆ.ವಿವಿಪ್ಯಾಟ್ ಸ್ಲಿಪ್ ಪರಿಶೀಲನೆಗಾಗಿ ಒಂದು ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ಅಳವಡಿಸುವುದಕ್ಕೆ ಯಾವುದೇ ವೈಜ್ಞಾನಿಕ ತರ್ಕ ಅಥವಾ ಸಂಖ್ಯಾಶಾಸ್ತ್ರೀಯ ಆಧಾರ ಇಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮುಂಬರುವ ಚುನಾವಣೆಗಳಿಗೆ ಮಾದರಿ ವಿವಿಪ್ಯಾಟ್ ಸ್ಲಿಪ್ ಎಣಿಕೆಯ ಹೆಚ್ಚಳದ ಪರವಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು,ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಅದರಿಂದ ಆಗುವ ಪರಿಣಾಮವನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸುಪ್ರೀಂಗೆ ಅಫಿಡವಿಟ್ ನ್ನು ಸಲ್ಲಿಸಿದೆ.ಈ ಅಫಿಡವಿಟ್ ನ್ನು ಪ್ರಮುಖವಾಗಿ ಮಾರ್ಚ್ 22 ರಂದು ಭಾರತೀಯ ಸಂಖ್ಯಾಶಾಸ್ತ್ರಿಯ ಸಂಸ್ಥೆ ಆಧಾರದ ಅನ್ವಯ ಸುಪ್ರೀಂಗೆ ಸಲ್ಲಿಸಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com