janadhvani

Kannada Online News Paper

ನಮ್ಮ ಪ್ರಣಾಳಿಕೆ ಒಬ್ಬನ ಅಭಿಪ್ರಾಯವಲ್ಲ, ಅದು ಜನರ ಧ್ವನಿ- ರಾಹುಲ್

ನವದೆಹಲಿ: ಲೋಕಸಭೆ ಚುನಾವಣೆ ಮೊದಲು ಬಿಡುಗಡೆಯಾಗಲಿರುವ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ನಮ್ಮ ಪ್ರಣಾಳಿಕೆ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ ಹೊರತು ಕೇವಲ ಒಬ್ಬನ ಅಭಿಪ್ರಾಯವಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ “ನಮಗೆ ಭಾರತದ ಜನರ ಧ್ವನಿ ಸಮೃದ್ದಗೊಳ್ಳಬೇಕಾಗಿದೆ.ನಾವು ಎಂದಿಗೂ ಕೂಡ ಒಬ್ಬ ವ್ಯಕ್ತಿಯ ಅಭಿಪ್ರಾಯದ ಮೇಲೆ ನಂಬಿಕೆ ಇಲ್ಲ ,ನಾವು ಎಲ್ಲರ ಆಯ್ಕೆ ಮತ್ತು ಧ್ವನಿಯ ಮೇಲೆ ನಂಬಿಕೆಯನ್ನು ಇಟ್ಟಿದ್ದೇವೆ.ಈ ನಿಟ್ಟಿನಲ್ಲಿ ಶಿಸ್ತನ್ನು ತರಲು ಸಾಕಷ್ಟು ಶ್ರಮವನ್ನು ವಹಿಸಲಾಗಿದೆ.ಇದು ನಿಜಕ್ಕೂ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ” ಎಂದರು.

ಕಾಂಗ್ರೆಸ್ ನ ಪ್ರಣಾಳಿಕೆ ಪ್ರಮುಖವಾಗಿ ಉದ್ಯೋಗ ಸೃಷ್ಟಿ , ಸಣ್ಣ ಉದ್ದಿಮೆಗಳ ಉತ್ತೇಜನ, ಕೃಷಿ ವಲಯದ ಅಭಿವೃದ್ದಿಗೆ ನೀಲ ನಕ್ಷೆಯನ್ನು ರೂಪಿಸಲಾಗಿದೆ. ಅಲ್ಲದೇ ಸಣ್ಣ ಉದ್ಯಮಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ತೆರಿಯ ನೀತಿಯಲ್ಲಿ ಸುಧಾರಣೆಯನ್ನು ಜಾರಿಗೆ ತರಲಾಗುವುದು ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಅಭಿವೃದ್ದಿ ಪಡಿಸುವಲ್ಲಿ ಶ್ರಮ ವಹಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆ ಪ್ರಾರಂಭವಾಗುವುದರ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆ ಬಿಡುಗಡೆಗೆ ಸಿದ್ದತೆ ನಡೆಸಿರುವ ಬೆನ್ನಲ್ಲೇ ಈಗ ರಾಹುಲ್ ಗಾಂಧಿಯವರ ಹೇಳಿಕೆ ಬಂದಿದೆ.

error: Content is protected !! Not allowed copy content from janadhvani.com