janadhvani

Kannada Online News Paper

ಯುಎಇ: ಸಾರಿಗೆ, ಪ್ರವಾಸೋದ್ಯಮ ಸೇರಿ ಏಳು ವಲಯಗಳಲ್ಲಿ ಸ್ವದೇಶೀಕರಣ

ದುಬೈ: ಯುಎಇಯು ಸ್ವದೇಶೀಕರಣ ಮಟ್ಟವನ್ನು ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಮಾನವ ಸಂಪನ್ಮೂಲ ಸಚಿವಾಲಯವು ಈ ವರ್ಷ ಸ್ವದೇಶೀಯರಿಗೆ 30,000 ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ತಿಳಿಸಿದ್ದು, ಹೊಸ ಪ್ರಕಟಣೆಯು ವಲಸಿಗರಿಗೆ ಒಂದು ಕಳವಳಕಾರಿಯಾಗಿ ಪರಿಣಮಿಸಲಿದೆ.

ಪ್ರಧಾನಿ, ಉಪಾಧ್ಯಕ್ಷ ಮತ್ತು ದುಬೈನ ಆಡಳಿತಾಧಿಕಾರಿ ಶೈಖ್ ಮಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಅವರು ಈ ವರ್ಷ ಯುಎಇಯಲ್ಲಿ ಸ್ವದೇಶೀಕರಣ ಮಟ್ಟವನ್ನು ದ್ವಿಗುಣಗೊಳಿಸಲಾಗುವುದು ಎಂದು ಘೋಷಿಸಿದ್ದು, ಅದರ ಆಧಾರದಲ್ಲಿ ಈ ನಡೆ ಎನ್ನಲಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸ್ವದೇಶೀಕರಣ ಖಾತೆಯ ಸಚಿವ ನಾಸಿರ್ ಬಿನ್ ಥಾನಿ ಅಲ್ ಹಮ್ಲಿ ಈ ಬಗ್ಗೆ ಮಾತನಾಡಿ, ಸ್ವದೇಶೀಕರಣವು ದೇಶದ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದ್ದು,
ಸಾರಿಗೆ, ವಿಮೆ, ಬ್ಯಾಂಕಿಂಗ್, ವಾಯುಯಾನ, ರಿಯಲ್ ಎಸ್ಟೇಟ್, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮುಂತಾದ ವಲಯಗಳಲ್ಲಿ ಸ್ವದೇಶೀಕರಣ ಜಾರಿಯಾಗಲಿದೆ ಎಂದಿದ್ದಾರೆ.

ಸ್ವದೇಶೀಕರಣವನ್ನು ಬಲಪಡಿಸುವ ಸಲುವಾಗಿ ಕೆಲಸ ಪರಿಶೀಲನೆ ಸೇರಿದಂತೆ ನಾಲ್ಕು ಯೋಜನೆಗಳನ್ನು ಸಚಿವಾಲಯ ಜಾರಿಗೊಳಿಸುತ್ತಿದೆ. 2018 ರಲ್ಲಿ 20,225 ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಲಯಗಳಲ್ಲಿ ದುಡಿಯುತ್ತಿರುವ ಭಾರತೀಯರು ಸೇರಿದಂತೆ ವಲಸಿಗರಿಗೆ ಇದು ಕಳವಳದ ಸಂಗತಿಯಾಗಿದೆ.

error: Content is protected !! Not allowed copy content from janadhvani.com