janadhvani

Kannada Online News Paper

ಅಬುಧಾಬಿಯಿಂದ ತನ್ನ ಎಲ್ಲಾ ಸೇವೆಗಳನ್ನು ರದ್ದು ಪಡಿಸಿದ ಜೆಟ್ ಏರ್ವೇಸ್

ಈ ವರದಿಯ ಧ್ವನಿಯನ್ನು ಆಲಿಸಿ


ಅಬುಧಾಬಿ: ಅಬುಧಾಬಿ ವಿಮಾನ ನಿಲ್ದಾಣದಿಂದ ತನ್ನ ಎಲ್ಲಾ ಸೇವೆಗಳನ್ನು ಜೆಟ್ ಏರ್ವೇಸ್ ರದ್ದುಗೊಳಿಸಿದೆ. ತಾಂತ್ರಿಕ ಕಾರಣಗಳಿಗಾಗಿ ಸೋಮವಾರದಿಂದ ಅನಿಶ್ಚಿತ ಕಾಲದವರೆಗೆ ಇದು ಮುಂದುವರಿಯಲಿದೆ. ಜೆಟ್ ಏರ್‌ವೇಸ್‌ನ ಎರಡು ಅಂತರರಾಷ್ಟ್ರೀಯ ಕೇಂದ್ರಗಳಲ್ಲಿ ಒಂದಾಗಿದೆ ಅಬುಧಾಬಿ.

ಅಬುಧಾಬಿಯ ರಾಷ್ಟ್ರೀಯ ವಿಮಾನ ಕಂಪೆನಿಯಾದ ಇತ್ತಿಹಾದ್ ಏರ್‌ವೇಸ್ ಹೂಡಿಕೆ ಪಾಲುದಾರಿಕೆ ಇರುವ ಜೆಟ್ ಏರ್‌ವೇಸ್‌ನ ಸರ್ವೀಸ್ ನಿಲ್ಲಿಸುತ್ತಿರುವುದರಿಂದ ಹಲವಾರು ಪ್ರಯಾಣಿಕರು ತೊಂದರೆ ಅನುಭವಿಸಲಿದ್ದಾರೆ.

ಇತ್ತಿಹಾದ್‌ನೊಂದಿಗೆ ಕೋಡ್ ‌ಶಯರಿಂಗ್ ಸಿಸ್ಟಮ್ನಲ್ಲಿ ಜೆಟ್ ಏರ್ವೇಸ್ ಕಾರ್ಯಾಚರಣೆ ಮಾಡುತ್ತಿದ್ದು, ತಾಂತ್ರಿಕ ಕಾರಣಗಳಿಗಾಗಿ ಸೇವೆ ನಿಲ್ಲಿಸಲ್ಪಟ್ಟಿದೆ ಮತ್ತು ಪ್ರಯಾಣಿಕರು ಇತ್ತಿಹಾದ್‌ನ ಕಚೇರಿಗೆ ಸಂಪರ್ಕಿಸುಂತೆ ಕೊರಲಾಗಿದೆ. ಆದರೆ, ಜೆಟ್ ಏರ್‌ವೇಸ್ ಈ ಬಗ್ಗೆ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ ಎನ್ನಲಾಗಿದೆ.

error: Content is protected !! Not allowed copy content from janadhvani.com