janadhvani

Kannada Online News Paper

ವಿದೇಶೀ ಕಾರ್ಮಿಕರ ಪ್ರಮಾಣ ಕಡಿಮೆಗೊಳಿಸುವಂತೆ ಕುವೈಟ್ ಸಂಸದರ ಒತ್ತಾಯ

ಕುವೈತ್ ಸಿಟಿ: ಪ್ರಸ್ತುತ ದೇಶದಲ್ಲಿರುವ ವಿದೇಶಿಗಳ ಪ್ರಮಾಣವನ್ನು ಶೇ 50 ಕ್ಕೆ ಇಳಿಸುವಂತೆ ಕುವೈತ್‌ನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ವಿದೇಶೀ ಕಾರ್ಮಿಕರ ಸಂಖ್ಯೆಯನ್ನು ಕಡಿಮೆಗೊಳಿಸಲು ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಹಲವಾರು ಸಂಸದರು ಸರಕಾರವನ್ನು ಒತ್ತಾಯಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ 3.3 ಮಿಲಿಯನ್ ವಿದೇಶಿಯರನ್ನು ಗಡಿಪಾರು ಮಾಡುವಂತಾಗಬೇಕು ಎಂಬ ಬೇಡಿಕೆಯಿತ್ತ ಸಂಸದರು, ಸ್ವದೇಶಿಗಳಿಗೆ ವೃತ್ತಿ ನೀಡುವ ಕ್ರಮವನ್ನು ತ್ವರಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ದೇಶವನ್ನು ವಿದೇಶೀಯರ ಕಪಿಮುಷ್ಠಿಯಿಂದ ಮುಕ್ತಗೊಳಿಸುವುದು ಅತ್ಯಾವಶ್ಯಕ ಎಂದಿರುವ ಸಂಸದರು, ಅತ್ಯಂತ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com