janadhvani

Kannada Online News Paper

ಹೂಡಿಕೆದಾರರು ಮತ್ತು ಉನ್ನತ ಉದ್ಯೋಗಿಗಳಿಗೆ 5 ,10 ವರ್ಷಗಳ ವೀಸಾ

ದುಬೈ: ಯುಎಇಯ ಸಚಿವ ಸಂಪುಟವು ಹೂಡಿಕೆದಾರರು ಮತ್ತು ಉನ್ನತ ಉದ್ಯೋಗಿಗಳಿಗೆ ಐದು ವರ್ಷ -10 ವರ್ಷಗಳ ವೀಸಾಗಳನ್ನು ಒದಗಿಸುವ ಯೋಜನೆಗೆ ಅನುಮೋದನೆ ನೀಡಿದೆ. ಈ ಬಗ್ಗೆ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ, ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಟ್ವಿಟ್ ಮಾಡಿದ್ದಾರೆ.

ವಿಭಿನ್ನ ವಲಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಅವಕಾಶಗಳನ್ನು ಪಡೆಯಲು ಹೊಸ ವೀಸಾ ವ್ಯವಸ್ಥೆ ಉಪಯುಕ್ತವಾಗಲಿದೆ ಎಂದಿದ್ದಾರೆ.

ಹೂಡಿಕೆದಾರರು, ವೈದ್ಯರು, ಇಂಜಿನಿಯರ್‌ಗಳು ಹಾಗೂ ವಿವಿಧ ವಲಯಗಳ ಅನುಭವ ಸಂಪನ್ನರು ತಮ್ಮ ಕುಟುಂಬದವರು ಹಾಗೂ ಸಾಧಿಸಲು ಸಮರ್ಥರಾದ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಈ ವಿಸಾ ಸಂಪ್ರದಾಯವನ್ನು ಜಾರಿಗೆ ತರಲು ಕಳೆದ ವರ್ಷ ನಿರ್ಧರಿಸಲಾಗಿತ್ತು.
ಅಲ್ಲದೆ ಪ್ರಮುಖ ಅಂತರರಾಷ್ಟ್ರೀಯ ಹೂಡಿಕೆದಾರರಿಗೆ 100% ಯೋಜನೆಗಳ ಮಾಲೀಕತ್ವವನ್ನು ಒದಗಿಸಲು ನಿರ್ಧರಿಸಲಾಗಿದೆ.

error: Content is protected !! Not allowed copy content from janadhvani.com