ಸೌದಿ ಅರೇಬಿಯಾ: ದಂಡ ವಿಧಿಸಿದಲ್ಲಿ ತಕ್ಷಣ ಪಾವತಿಸಬೇಕಾಗಿಲ್ಲ

ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನುಮುಂದೆ ದಂಡ ವಿಧಿಸಿದಲ್ಲಿ ತಕ್ಷಣ ಪಾವತಿಸಬೇಕಾಗಿಲ್ಲ. ದಂಡವನ್ನು ತಪ್ಪಾಗಿ ವಿಧಿಸಿದರೆ, ಅದರ ವಿರುದ್ದ ಸಂಚಾರ ಪ್ರಾಧಿಕಾರವನ್ನು ಮನವರಿಕೆ ಮಾಡುವ ಅವಕಾಶವನ್ನು ನೀಡುವ ಕ್ರಮ ಕೈಗೊಳ್ಳಲಾಗಿದ್ದು, ಈಗ ಸಂಚಾರ ನಿರ್ದೇಶನಾಲಯವನ್ನು ಆನ್ ಲೈನ್ ಮೂಲಕ ತಿಳಿಸಲು ಸಾಧ್ಯವಿದೆ.

ಗೃಹ ಸಚಿವಾಲಯದ ಆನ್ ಲೈನ್ ಸೇವಾ ಪೋರ್ಟಲ್ ಅಬ್ಶೀರ್ ಮೂಲಕ ತಿಳಿಸಬಹುದಾಗಿದ್ದು, ಮೊದಲ ಹಂತವಾಗಿ ಈ ಯೊಜನೆಯನ್ನು ಅಲ್ ಖಸೀಮ್ ಪ್ರಾಂತ್ಯದಲ್ಲಿ ಜಾರಿಗೆ ತರಲಾಗುತ್ತದೆ. ಸಂಚಾರ ನಿರ್ದೇಶನಾಲಯದ ನಿರ್ದೇಶಕ ಮೇಜರ್ ಜನರಲ್ ಮುಹಮ್ಮದ್ ಅಲ್ ಬಾಸ್ಸಾಮಿ ಈ ಬಗ್ಗೆ ಮಾತನಾಡಿ, ಈ ವರ್ಷಾಂತ್ಯಕ್ಕೆ ಸೇವೆಯನ್ನು ದೇಶದ ಎಲ್ಲಾ ವಲಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!