janadhvani

Kannada Online News Paper

ಮಂಜೇಶ್ವರ: ಮಾ.17 ರಂದು ಮೀಂಜದಲ್ಲಿ ಬೃಹತ್ ರಕ್ತದಾನ ಶಿಬಿರ

ಈ ವರದಿಯ ಧ್ವನಿಯನ್ನು ಆಲಿಸಿ


ಮಂಜೇಶ್ವರ :ಮೀಂಜ ಯೂತ್ ಕೊರ್ಡಿನೇಷನ್ ಕಮಿಟಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಆಶ್ರಯದಲ್ಲಿ ಮಾರ್ಚ್17 ಆದಿತ್ಯವಾರದಂದು ಬೃಹತ್ ರಕ್ತದಾನ ಶಿಬಿರವು ಎಸ್.ವಿ.ವಿ.ಹೆಚ್. ಎಸ್ ಶಾಲೆಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ.

ರಕ್ತದಾನ ಮಹಾದಾನ ನಮ್ಮಲ್ಲಿಲ್ಲ ಹಿಂದೂ ರಕ್ತ, ನಮ್ಮಲ್ಲಿಲ್ಲ ಮುಸ್ಲಿಂ ರಕ್ತ, ನಮ್ಮಲ್ಲಿಲ್ಲ ಕ್ರೈಸ್ತ ರಕ್ತ ಎಂಬ ಧ್ಯೇಯ ವಾಕ್ಯದೊಂದಿಗೆ ಸಾಮೂಹಿಕ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಮೀಂಜ ಪಂಚಾಯತ್ ನ ವ್ಯಾಪ್ತಿಯಲ್ಲಿ ಬರುವಂತಹ ನೋಂದಾವಣೆಯಾದ 39 ಸ್ಪೊರ್ಟ್ ಕ್ಲಬ್ , ಮಸೀದಿ, ಮಂದಿರ ಹಾಗೂ ಚರ್ಚ್ ಸದಸ್ಯರನ್ನು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಿತರಾಗಿ ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಶ್ರೇಷ್ಟ ದಾನವಾದ ರಕ್ತದಾನದ ಮಹತ್ವವನ್ನು ಸಾರಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾನವೀಯ ಮೌಲ್ಯಗಳ ಕೊಂಡಿಯಾಗಿ ಈ ಶಿಬಿರವನ್ನು ಯಶಸ್ವಿಗೊಳಿಸುವಂತೆ ಮೀಂಜ ಯೂತ್ ಕೋರ್ಡಿನೇಷನ್ ಪರವಾಗಿ ಕೋರಲಾಗಿದೆ.

ವರದಿ : ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್
(ಆಡ್ಮಿನ್ ಬ್ಲಡ್ ಡೋನರ್ಸ್ ಮಂಗಳೂರು)

error: Content is protected !! Not allowed copy content from janadhvani.com