ಸೌದಿ ಅರೇಬಿಯಾ: ಅನಧಿಕೃತ ವಲಸಿಗರಿಗಾಗಿ ಕಠಿಣ ಶೋಧ

ಜಿದ್ದಾ: ಅನಧಿಕೃತವಾಗಿ ಸೌದಿ ಅರೇಬಿಯಾದಲ್ಲಿ ಉಳಿದುಕೊಂಡಿರುವವರ ಕಠಿಣ ಶೋಧಕಾರ್ಯ ಮುಂದುವರಿಯುತ್ತಿದೆ. ರಾಜ ಸಲ್ಮಾನ್, ಸೌದಿ ಅರೇಬಿಯಾದಿಂದ ಅನಧಿಕೃತ ವಲಸಿಗರ ನಿರ್ಗಮನಕ್ಕಾಗಿ ವಿವಿಧ ಹಂತಗಳಲ್ಲಿ ಸಾರ್ವಜನಿಕ ಕ್ಷಮಾಪಣೆಯನ್ನು ನೀಡಿದ್ದರು. ಕೊನೆಯ ಸಾರ್ವಜನಿಕ ಕ್ಷಮಾಪಣೆಯು 2017ರ ನವೆಂಬರ್‌ 14 ರಂದು ಕೊನೆಗೊಂಡಿತ್ತು. ಅನಧಿಕೃತ ವಲಸಿಗರಿಗಾಗಿನ ಹುಡುಕಾಟವು ಅದೇ ತಿಂಗಳ 15 ರಿಂದ ಆರಂಭಿಸಿ ಈ ವರೆಗೆಗೆ, 27 ಲಕ್ಷ. ಅನಧಿಕೃತರನ್ನು ಪತ್ತೆಹಚ್ಚಲಾಗಿದೆ.

ಏಳು ಲಕ್ಷಕ್ಕಿಂತ ಹೆಚ್ಚಿನ ಅನಧಿಕೃತ ವಲಸಿಗರನ್ನು ಗಡೀಪಾರು ಮಾಡಲಾಗಿದ್ದು, ಉಳಿದವರು ಕಾನೂನನ್ನು ಎದುರಿಸುತ್ತಿದ್ದಾರೆ. ಅಲ್ಲಿನ ಗೃಹ ಇಲಾಖೆಯು ಈ  ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಸೌದಿ ಭದ್ರತಾ ತಂಡವು ವಿವಿಧ ಪ್ರಾಂತ್ಯಗಳಲ್ಲಿ ಹುಡುಕಾಟ ಮುಂದುವರೆಸಿದೆ.

ಪತ್ತೆಹಚ್ಚಲಾದ ಅನಧಿಕೃತ ವಲಸಿಗರ ಪೈಕಿ 21.5 ಲಕ್ಷ ಮಂದಿ ಇಖಾಮಾ ಕಾನೂನು ಉಲ್ಲಂಘನೆ ಮಾಡಿದವರಾಗಿದ್ದು, ಇದರಲ್ಲಿ 1.75 ಲಕ್ಷ ಜನರು ಗಡಿ ಮೂಲಕ ನುಸುಳಿಕೊಂಡವರಾಗಿದ್ದಾರೆ. ಅದೇ ಸಮಯದಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆಗಾಗಿ 4.5 ಲಕ್ಷಕ್ಕೂ ಅಧಿಕ ವಲಸಿಗರನ್ನು ಬಂಧಿಸಲಾಗಿದೆ.

ದೇಶಾದ್ಯಂತ ವಿವಿಧ ಗಡಿಗಳ ಮೂಲಕ ನುಸುಳಲು ಪ್ರಯತ್ನಿಸುತ್ತಿದ್ದ 27,000 ಜನರನ್ನು ಗಡಿ ಕಾವಲುಗಾರರು ವಶಪಡಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಯೆಮೆನ್ ಮತ್ತು ಇಥಿಯೋಪಿಯಾದವರಾಗಿದ್ದಾರೆ. ಗಡಿಯುದ್ದಕ್ಕೂ ವಿದೇಶಕ್ಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನೂ ಗಡಿ ಕಾವಲುಗಾರರು ಸೆರೆಹಿಡಿದಿದ್ದಾರೆ. ಕಾನೂನಿನ ಉಲ್ಲಂಘನೆಗಾರರಿಗೆ ಆಶ್ರಯ ನೀಡಿದವರನ್ನೂ ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!