ಮಕ್ಕಾ: ಪವಿತ್ರ ಮಕ್ಕಾದಲ್ಲಿ ರಂಝಾನ್‌ಗೆ ಸ್ವಾಗತ ನೀಡುವ ಕ್ರಮಗಳಿಗೆ ರೂಪುರೇಷೆ ನೀಡಲಾಗಿದ್ದು, ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಯಾತ್ರಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಮಕ್ಕಾದ ಗವರ್ನರ್ ಅಮೀರ್ ಖಾಲಿದ್ ಅಲ್-ಫೈಝಲ್ ಅವರು ಉಮ್ರಾ ಯಾತ್ರಿಕರಿಗೆ ನೀಡಲಾಗುವ ಸೇವೆಗಳನ್ನು ಪರೀಕ್ಷಿಸುವಂತೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ.
ರಮಝಾನ್ ಋತುವಿನಲ್ಲಿ ಈ ಹಿಂದೆ ಆಗಮಿಸುತ್ತಿದ್ದ ಯಾತ್ರಕರಿಂತ 10 ಪಟ್ಟು ಹೆಚ್ಚಿನ ಯಾತ್ರಿಕರು ಆಗಮಿಸಲಿದ್ದಾರೆ. ಎರಡು ಹರಂಗಳಲ್ಲಿ ಈ ಋತುವಿನಲ್ಲಿ 75 ಲಕ್ಷ ಯಾತ್ರಿಕರು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಯಾತ್ರಾರ್ಥಿಗಳ ಸೇವೆಗಾಗಿ 12000 ಉದ್ಯೋಗಿಗಳು ಮತ್ತು ಸ್ವಚ್ಛಗೊಳಿಸುವ ಸಲುವಾಗಿ 876 ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ.
ಮಕ್ಕಾದಲ್ಲಿನ 58 ಸುರಂಗಗಳ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಹರಂನಲ್ಲಿ 400 ಜನರನ್ನು ತಾತ್ಕಾಲಿಕ ವೀಕ್ಷಕರಾಗಿ ನೇಮಕಗೊಳಿಸಲಾಗಿದೆ. ಯಾತ್ರಿಕರ ಸುರಕ್ಷತೆಗಾಗಿ ಹತ್ತು ಸಾವಿರ ತಾತ್ಕಾಲಿಕ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದ್ದು, ಹಜ್ ಸಚಿವಾಲಯವು ಸಿದ್ಧತೆಯ ನಿರೀಕ್ಷಣೆಗಾಗಿ ವಿಶೇಷ ತಂಡವನ್ನು ನೇಮಿಸಿದೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ