ಮಂಗಳೂರು: ಸುನ್ನಿ ಮುಸ್ಲಿಮ್ಸ್ ಆಫ್ ಇಂಡಿಯಾದ ಗ್ರಾಂಡ್ ಮುಫ್ತಿಯಾಗಿ ನಿಯುಕ್ತಿಗೊಂಡ ಶೈಖುನಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಮಂಗಳೂರಿನ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನಿಂದ ನಗರದ ಪಂಪ್‌ವೆಲ್‌ನ ಮಸ್ಜಿದು ತಖ್ವಾದಲ್ಲಿ ಮಾ.3 ರವಿವಾರ ಸಂಜೆ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ, ಬ್ಯಾರೀಸ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಮುಮ್ತಾಝ್ ಅಲಿ, ಶಾಫಿ ಸಅದಿ, ಡಾ. ಅಬ್ದುಲ್ ರಶೀದ್ ಝೈನಿ ಉಸ್ತಾದ್, ಹೈದರ್ ಪರ್ತಿಪ್ಪಾಡಿ, ಪಂಪ್‌ವೆಲ್ ಖತೀಬ್ ಅಬ್ದುಲ್ ರಹ್ಮಾನ್ ಸಖಾಫಿ, ಪಿ.ಸಿ.ಹಾಸಿರ್, ಅಬುಸುಫ್ಯಾನ್ ಮದನಿ, ಮಾಜಿ ಶಾಸಕ ಮೊಯ್ದಿನ್ ಬಾವ ಮತ್ತಿತರರು ಉಪಸ್ಥಿತರಿದ್ದರು.