ಅಲ್ಲಾಹನ , ಪ್ರವಾದಿ ಮುಹಮ್ಮದ್ ( ಸ.ಅ) ರ ವಿರುದ್ದ ಹಾಗೂ ಪವಿತ್ರ ಇಸ್ಲಾಮ್ ಧರ್ಮ ಮತ್ತು ಬ್ಯಾರಿ ಜನಾಂಗದ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಬಳಕೆ ಮಾಡಿ ತನ್ನ. ಫ಼ೇಸ್ಬುಕಿನಲ್ಲಿ ಅವಾಚ್ಯವಾಗಿ ನಿಂದಿಸಿದ ಮನೋಜ್ ಮನೋಹರ ಗೌಡ ಎಂಬಾತನ ಮೇಲೆ ಇಂದು ಶುಕ್ರವಾರ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನೇತಾರ ರಹೀಂ ಉಚ್ಚಿಲ್ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..ಆರೋಪಿ ತನ್ನ ಫ಼ೇಸ್ಬುಕ್ ಪೇಜನ್ನು ಡಿಲೀಟ್ ಮಾಡಿದ ಕಾರಣ ನಾಳೆ ದಾಖಲೆ ಪರಿಶೀಲಿಸಿ ಎಫ಼್ ಐ ಆರ್ ದಾಖಲಿಸುವ ಬರವಸೆಯನ್ನು ಉನ್ನತ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.