janadhvani

Kannada Online News Paper

ಲೆವಿ ವಿನಾಯ್ತಿ: ಹೊಸ ವರ್ಷಕ್ಕೆ ಅನ್ವಯಿಸುವುದಿಲ್ಲ

ರಿಯಾದ್: ಕಳೆದ ವರ್ಷದ ಲೆವಿ ಇನ್ವಾಯ್ಸ್ ಪಾವತಿಗೆ ನೀಡಲಾಗಿದ್ದ ವಿನಾಯಿತಿ ಹೊಸ ವರ್ಷಕ್ಕೆ ಅನ್ವಯಿಸುವುದಿಲ್ಲ. ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯವು ಖಾಸಗಿ ವಲಯದ ಸಂಸ್ಥೆಗಳಿಗೆ ಈ ವರ್ಷದ ಲೆವಿಯನ್ನು ಪಾವತಿಸುವಂತೆ ಆದೇಶ ನೀಡಿದೆ.ಏಪ್ರಿಲ್ 30ರಿಂದ ವಿಳಂಬಗೊಳಿಸುವ ಕಂಪೆನಿಗಳಿಗೆ ನೀಡಲಾಗುವ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.

ಕಳೆದ ವರ್ಷದ ಲೆವಿ ಪಾವತಿಯಲ್ಲಿ ವಿನಾಯಿತಿಯ ನಿರ್ಧಾರವನ್ನು ಎರಡು ವಾರಗಳ ಹಿಂದೆಯಷ್ಟೇ ತೆಗೆದುಕೊಳ್ಳಲಾಗಿತ್ತು. ಆದರೆ ಈ ವರ್ಷದ ಲೆವಿ ಪಾವತಿಸದಿದ್ದರೆ ಎ.30ರಿಂದ ಸೇವೆಗಳನ್ನು ನಿಲ್ಲಿಸಲಾಗುವುದು ಎಂದ ಸಚಿವಾಲಯವು, ಈ ವರ್ಷದ ಜನವರಿ 1ರಿಂದ ಇಖಾಮಾ ಅಥವಾ ಕೆಲಸದ ಪರವಾನಗಿಯನ್ನು ನವೀಕರಿಸಿದವರು ಮತ್ತು ಪಡೆದವರು ಲೆವಿ ಪಾವತಿಸುವಂತೆ ಆದೇಶಿಸಿದೆ.

ಸೌದಿ ಕೆಲಸಗಾರರಿಗಿಂತ ಹೆಚ್ಚು ವಿದೇಶಿಗರಿರುವ ಕಂಪೆನಿಗಳು ಪ್ರತೀ ವ್ಯಕ್ತಿಗೆ ವರ್ಷಕ್ಕೆ 7,200 ರಿಯಾಲ್ ಮತ್ತು ಸ್ವದೇಶಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ಕಂಪೆನಿಯಲ್ಲಿ ಪ್ರತೀ ವಿದೇಶಿಗೆ 6,000 ರಿಯಾಲ್ ಲೆವಿ ಪಾವತಿಸಬೇಕು. ಮುಂದಿನ ವರ್ಷ, ಇದು ಕ್ರಮವಾಗಿ 9600 ಮತ್ತು 8400 ಕ್ಕೆ ಏರಿಕೆಯಾಗಲಿದೆ. ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರಿರುವ ಸಂಸ್ಥೆಗಳನ್ನು ಲೆವಿಯಿಂದ ಮುಕ್ತಗೊಳಿಸಲಾಗಿದೆ. ಉದ್ಯೋಗದಾತ ಪೂರ್ಣ ಸಮಯ ಕೆಲಸ ಮಾಡುವ ಒಂಬತ್ತು ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಕಂಪೆನಿಗಳಲ್ಲಿನ ನಾಲ್ಕು ವಿದೇಶಿ ನೌಕರರಿಗೂ ಲೆವಿ ಪಾವತಿಸಬೇಕಾಗಿಲ್ಲ

error: Content is protected !! Not allowed copy content from janadhvani.com