janadhvani

Kannada Online News Paper

ಉಸಾಮಾ ಬಿನ್ ಲಾಡೆನ್ ಪುತ್ರನ ಪೌರತ್ವ ರದ್ದು ಗೊಳಿಸಿದ ಸೌದಿ ಅರೇಬಿಯಾ

ರಿಯಾದ್: ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ವಿರುದ್ಧ ಅಮೆರಿಕ ನಿಂತಿರುವ ಬೆನ್ನೆಲ್ಲೇ ಸೌದಿ ಅರೇಬಿಯಾ ಸರ್ಕಾರ ಕೂಡ ಆತನ ಸೌದಿ ಪೌರತ್ವವನ್ನು ರದ್ದುಗೊಳಿಸಿದೆ.

ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದೆಡೆ ಅಮೆರಿಕ ಸರ್ಕಾರ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‍ನನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದೆ. ಇನ್ನೊಂದೆಡೆ ಸೌದಿ ಸರ್ಕಾರ ಹಮ್ಜಾ ಬಿನ್ ಲಾಡೆನ್ ಹೊಂದಿದ್ದ ಸೌದಿ ಪೌರತ್ವವನ್ನು ರದ್ದುಗೊಳಿಸುವ ಮೂಲಕ ಭಯೋತ್ಪಾದನೆಯನ್ನು ಹೊಡಿದೋಡಿಸಲು ತೀರ್ಮಾನಿಸಿದೆ.

ಒಸಾಮಾ ಬಿನ್ ಲಾಡೆನ್ ನಂತರ ಅಲ್- ಖೈದಾ ನಾಯಕನಾಗಿ ಹಮ್ಜಾ ಬೆಳೆಯುತ್ತಿದ್ದಾನೆ. ಅವನಿಂದ ಹಲವು ರಾಷ್ಟ್ರಗಳಿಗೆ ತೊಂದರೆ ಇದೆ. ಆತ ಹಲವು ಉಗ್ರ ದಾಳಿಯಲ್ಲೂ ಕೂಡ ಭಾಗಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಆತನ ಪೌರತ್ವವನ್ನು ರದ್ದುಮಾಡಿದ್ದು, ಆತ ಇನ್ಮುಂದೆ ಸೌದಿಯಲ್ಲಿ ವಾಸಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

error: Content is protected !! Not allowed copy content from janadhvani.com