janadhvani

Kannada Online News Paper

ಅಲ್ಪಸಂಖ್ಯಾತರ ಶೈಕ್ಷಣಿಕ ಉನ್ನತಿಯತ್ತ ಸರ್ಕಾರ ಗಮನಹರಿಸಬೇಕು -ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನದಲ್ಲಿ ಎ.ಪಿ.ಉಸ್ತಾದ್

ಹೊಸದಿಲ್ಲಿ, ಫೆ. 25: ಭಾರತದ ಸಂವಿಧಾನವು ಬಹುಸಂಖ್ಯಾತ- ಅಲ್ಪಸಂಖ್ಯಾತ ವ್ಯತ್ಯಾಸವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಆದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿಯುವ ಮೂಲಕ ಹಕ್ಕುಗಳನ್ನು ಅನುಭವಿಸುವುದರಲ್ಲಿ ವಿಫಲರಾಗುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ಮುಂದುವರಿಯುವ ಮೂಲಕ ಪ್ರಗತಿ ಸಾಧಿಸಲು ಸಮುದಾಯ ಪ್ರಯತ್ನಿಸುವುದರೊಂದಿಗೆ ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ಸರ್ಕಾರಗಳು ನಿರ್ಮಿಸಿ ಕೊಡಬೇಕು ಎಂದು ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನ ಸಮಾರೋಪವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿರಿಯ ನಾಯಕ ಸೈಯದ್ ಜಾವೇದ್ ಮನ್ನಾನ್ ಮಿಯಾ ಹಝ್ರತ್ ಬರೇಲ್ವಿ ಸಮ್ಮೇಳನ ಉದ್ಘಾಟಿಸಿದರು. ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ, ಡಾ. ಹುಸೈನ್ ಸಖಾಫಿ, ಡಾ ಎಪಿ ಅಬ್ದುಲ್ ಹಕೀಂ ಅಝ್ಹರಿ, ಡಾ. ಫಾರೂಖ್ ನಯಿಮಿ ಮೊದಲಾದವರು ಮಾತನಾಡಿದರು.

ಎಸ್ಸೆಸ್ಸಫ್ ರಾಷ್ಟ್ರೀಯ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಕ್ಯಾಂಪಸ್ ಕಾರ್ಯದರ್ಶಿ ಸೈಯದ್ ಸಾಜಿದ್ ಬುಖಾರಿ ಕಾಶ್ಮೀರ ವಂದಿಸಿದರು.

ರಾಜ್ ಘಾಟ್ ನಿಂದ ರಾಮಲೀಲಾ ಮೈದಾನದವರೆಗೆ ಬೃಹತ್ ವಿದ್ಯಾರ್ಥಿ ಜಾಥಾ ನಡೆಯಿತು.

error: Content is protected !! Not allowed copy content from janadhvani.com