janadhvani

Kannada Online News Paper

ರಿಯಾದ್: ಪ್ಯಾಲೆಸ್ತೀನಿಯನ್ ಅಧ್ಯಕ್ಷ ಮುಹ್ಮೂದ್ ಅಬ್ಬಾಸ್ ಸೌದಿ ಅರೇಬಿಯಾದಲ್ಲಿ ಆಡಳಿತಗಾರ ಸಲ್ಮಾನ್ ರಾಜರ ಜೊತೆಗೆ ಸಭೆ ನಡೆಸಿದ್ದು, ಜೆರುಸಲೇಂ ರಾಜಧಾನಿಯಾಗಿರುವ ಸ್ವತಂತ್ರ ಪ್ಯಾಲೆಸ್ತೀನಿಯನ್ ರಾಷ್ಟ್ರ ಸ್ಥಾಪನೆಗೆ ಬೇಕಾದ ಎಲ್ಲಾ ವಿಧ ಪ್ರಯತ್ನವನ್ನು ಮುಂದುವರಿಸುವುದಾಗಿ ರಾಜ ಸಲ್ಮಾನ್ ಹೇಳಿದ್ದಾರೆ.

ಸಲ್ಮಾನ್ ರಾಜರು, ಪ್ಯಾಲೆಸ್ತೀನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ರನ್ನು ರಿಯಾದ್‌ನಲ್ಲಿ ಬರಮಾಡಿಕೊಂಡರು. ರಾಜ ಸಲ್ಮಾನ್ ಮಾತನಾಡಿ, ಪೆಲಸ್ತೀನ್ ಸಮಸ್ಯೆಯು ಸೌದಿಗಳ ಮೊದಲ ಆಧ್ಯತೆ ವಿಷಯವಾಗಿದ್ದು, ಖುದುಸ್ ರಾಜಧಾನಿಯಾಗಿರುವ ಸ್ವತಂತ್ರ ಪೆಲಸ್ತೀನ್ ದೇಶ ಸ್ಥಾಪಿಸುವ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದರು.

ಸದರಿ ಪ್ರದೇಶದ ರಾಜಕೀಯ ಮತ್ತು ಭದ್ರತಾ ವಿಷಯಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರೆಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ವಿದೇಶಾಂಗ ಸಚಿವ ಡಾ.ಇಬ್ರಾಹೀಂ ಅಲ್-ಅಸ್ಸಾಫ್, ಹಣಕಾಸು ಸಚಿವ ಮುಹಮ್ಮದ್ ಅಲ್ ಜದ್‌ಆನ್ ಮತ್ತು ಪೆಲಸ್ತೀನ್ ಅಧ್ಯಕ್ಷೀಯ ತಂಡದ ಹಲವು ಹಿರಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೌದಿ ಅರೇಬಿಯಾವು ಪೆಲಸ್ತೀನ್‌ನ ವಿವಿಧ ಪ್ರದೇಶಗಳಿಗೆ ನೀಡುವ ಸಹಾಯವನ್ನು ಮುಂದುವರಿಸುತ್ತಿದೆ

error: Content is protected !!
%d bloggers like this: