janadhvani

Kannada Online News Paper

ಫೆ.19 ರಂದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ

ರಿಯಾದ್: ಮುಂದಿನ ಕಿರೀಟಧಾರಿ ರಾಜಕುಮಾರ ಮತ್ತು ರಕ್ಷಣಾ ಸಚಿವ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಈ ತಿಂಗಳ 19 ಮತ್ತು 20ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಸೌದಿ ಅರೇಬಿಯಾದ ಭಾರತೀಯ ದೂತಾವಾಸ ಕೇಂದ್ರ ಪ್ರಕಟನೆಯಲ್ಲಿ ತಿಳಿಸಿದೆ.

ಫೆ.19ರಂದು ಹೊಸದಿಲ್ಲಿಗೆ ತಲುಪಲಿದ್ದು, ಅಧ್ಯಕ್ಷ, ಪ್ರಧಾನಿ ಮತ್ತು ಉಪಾಧ್ಯಕ್ಷರನ್ನು ಭೇಟಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸೌದಿ ಭೇಟಿಯ ಒಂದು ಭಾಗವಾಗಿ ಭಾರತಕ್ಕೆ ಅಮೀರ್ ಮುಹಮ್ಮದ್ ಅವರು ಭೇಟಿ ನೀಡುತ್ತಿದ್ದಾರೆ.
ಈ ಎರಡೂ ದೇಶಗಳ ನಡುವಿನ ಸಂಬಂಧಗಳು ಮತ್ತು ಸಹಕಾರ ಸಹಭಾಗಿತ್ವದಲ್ಲಿ ಹೆಚ್ಚಿನ ಪ್ರಗತಿ ಉಂಟಾಗಿದೆ ಎಂದು ಭಾರತೀಯ ದೂತಾವಾಸವು ತಿಳಿಸಿದೆ.ಭೇಟಿಯ ಸಂದರ್ಭ ಸಲ್ಮಾನ್ ರಾಜಕುಮಾರ ನವ ದೆಹಲಿಯ ಸೌದಿ ರಾಯಭಾರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಉದ್ಯಮಿಗಳು ಮತ್ತು ಹೂಡಿಕೆದಾರರು ಸೌದಿ ರಾಜಕುಮಾರರ ಭೇಟಿಯಲ್ಲಿ ನಿರೀಕ್ಷೆ ಇಟ್ಟಿದ್ದಾರೆ. ರಾಜಕುಮಾರರೊಂದಿಗೆ ಮಂತ್ರಿಗಳು, ರಾಜತಾಂತ್ರಿಕರು ಮತ್ತು ಪತ್ರಕರ್ತರನ್ನೊಳಗೊಂಡ ತಂಡವು ಅನುಗಮಿಸಲಿದೆ.
ಗಲ್ಫ್ ವ್ಯಾಪಾರ ವಲಯದಲ್ಲಿ ಸಹಭಾಗಿತ್ವವುಳ್ಳ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಭಾರತ. ಭಾರತಕ್ಕೆ ಪ್ರಮುಖ ಕಚ್ಚಾ ತೈಲ ಪೂರೈಕೆ ಮಾಡುವ ದೇಶವಾಗಿದೆ ಸೌದಿ ಅರೇಬಿಯಾ.

ಇಪ್ಪತ್ತು ಲಕ್ಷದಷ್ಟು ಭಾರತೀಯರು ಸೌದಿಯ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 2010ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.

error: Content is protected !! Not allowed copy content from janadhvani.com