ಖತಾರ್: ಖತಾರ್ ಏರ್ವೇಸ್‌ನಿಂತ ಭಾರತೀಯ ಗ್ರಾಹಕರಿಗೆ ಕಂತು ವ್ಯವಸ್ಥೆಯಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಿದೆ.ಖತಾರ್ ಏರ್ವೇಸ್ ತನ್ನ ವೆಬ್ ಸೈಟ್‌ನ ಪಾವತಿ ಆಯ್ಕೆಗಳಲ್ಲಿ ವಿವಿಧ ದೇಶಗಳಿಗೆ ಸ್ಕೀಮ್‌ಗಳನ್ನು ಆಯೋಜಿಸಿದೆ.
ಇದರಲ್ಲಿ ಭಾರತದ ಹೆಸರನ್ನು ಆಯ್ಕೆ ಮಾಡಿದಾಗ ಹೊಸ ಇಎಂಐ ಸೌಲಭ್ಯದ ಬಗ್ಗೆ ವಿವರಿಸಲಾಗಿದೆ. ನಿಶ್ಚಿತ ಬ್ಯಾಂಕಿನ ಕ್ರೆಡಿಟ್ ಕಾರ್ಡನ್ನು ಬಳಸಿ ಟಿಕೆಟ್ ಕಾಯ್ದಿರಿಸುವಾಗ ಕಂತು ವ್ಯವಸ್ಥೆಯಲ್ಲಿ ಪಾವತಿಸಲು ಸಾಧ್ಯವಾಗಲಿದೆ. ಇಎಂಐ ಆಗಿ ಸಣ್ಣ ಮೊತ್ತವನ್ನು ಪಾವತಿಸಿದ ನಂತರ ಹನ್ನೆರಡು ತಿಂಗಳುಗಳ ಒಳಗೆ ಕಂತುಗಳಾಗಿ ಪೂರ್ಣ ಮೊತ್ತವನ್ನು ಪಾವತಿಸಿದರೆ ಸಾಕಾಗುತ್ತದೆ.
ಆಕ್ಸಿಸ್ ಬ್ಯಾಂಕ್, ಎಚ್ಎಸ್ಬಿಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡಿ ಬ್ಯಾಂಕ್, ಕೋಟಾಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಮುಂತಾಸ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳಿಗೆ ಈ ಸೌಲಭ್ಯ ದೊರಕಲಿದೆ.
ಖತಾರ್ ಏರ್ವೇಸ್ನ ಹಿರಿಯ ವಾಣಿಜ್ಯ ವ್ಯವಸ್ಥಾಪಕ ನವೀನ್ ಚಾವ್ಲಾ ವಿವಿಧ ಭಾರತೀಯ ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ, ಪ್ರಯಾಣಿಕರೊಂದಿಗಿನ ತನ್ನ ಬದ್ಧತೆ ಮತ್ತು ಸಂಬಂಧವನ್ನು ಹೆಚ್ಚಿಸುವ ಸಲುವಾಗಿ ಹೊಸ ಕೊಡುಗೆಗಳನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.