janadhvani

Kannada Online News Paper

ವಾಟ್ಸಾಪ್ ನಲ್ಲಿ ಹೆಚ್ಚುತ್ತಿರುವ ಫೇಕ್ ನ್ಯೂಸ್-ನಿಯಂತ್ರಿಸಲು ಸೂಚನೆ

ನವದೆಹಲಿ: ಹೆಚ್ಚುತ್ತಿರುವ ಫೇಕ್ ನ್ಯೂಸ್ ಗೆ ಕತ್ತರಿ ಹಾಕುವಂತೆ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ವಾಟ್ಸಪ್ ಗೆ ಸೂಚನೆ ನೀಡಿದೆ. ಫೇಕ್ ನ್ಯೂಸ್ ನಿಂದಾಗಿ ಹಲವು ಹಲವು ದುರ್ಘಟನೆಗಳು ನಡೆಯುವುದಕ್ಕೆ ದಾರಿ ಮಾಡಿಕೊಟ್ಟ ಹಾಗಾಗಿದೆ.ಆದ್ದರಿಂದ ಇದಕ್ಕೆ ನಿಯಂತ್ರಣ ಹಾಕಬೇಕೆಂದು ಮತ್ತೊಮ್ಮೆ ಕೇಂದ್ರ ಆದೇಶಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಪ್ರಮುಖವಾಗಿ ವಾಟ್ಸಪ್ ನಲ್ಲಿ ಹರಡುತ್ತಿರುವ ಸುಳ್ಳು ಸುದ್ದಿ ವಿಚಾರವನ್ನು ಸರ್ಕಾರದ ಗಂಭೀರವಾಗಿ ಪರಿಗಣಿಸಿದೆ.ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ವಿಭಾಗವು ಈಗ ವಾಟ್ಸ್‌ಆ್ಯಪ್‌ ಕಂಪನಿಗೆ ಇಂತಹ ಘಟನೆಗಳಿಂದ ಸಂಭವಿಸುವ ಅನಾಹುತಗಳಿಗೆ ಹೊಣೆಯಾಗಬೇಕು ಇಲ್ಲವೇ ಕಾನೂನು ಕ್ರಮವನ್ನು ಎದುರಿಸಬೇಕೆಂದು ಎಚ್ಚರಿಕೆ ನೀಡಿದೆ.

ಈಗ ವಿಚಾರವಾಗಿ ಲೋಕಸಭೆಯಲ್ಲಿ ಮಾಹಿತಿ ನೀಡಿರುವ ಗೃಹ ಖಾತೆ ಸಹಾಯಕ ಸಚಿವ ಹಂಸರಾಜ್‌ ಅಹಿರ್‌ ಬರುವ ದಿನಗಳಲ್ಲಿ ಕಾನೂನು ಕ್ರಮಗಳು ಇನ್ನಷ್ಟು ಬಿಗಿಯಾಗಲಿವೆ ಎಂದು ತಿಳಿಸಿದ್ದಾರೆ.

1
1
1

error: Content is protected !! Not allowed copy content from janadhvani.com