ಮಲಪ್ಪುರಂ: ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡಮಿಯಲ್ಲಿ ನಡೆದ ‘ಸಿಬಾಖ’ ಪ್ರತಿಭೋತ್ಸವದಲ್ಲಿ ನಾಟಕ ಮತ್ತು ಕಿರು ಚಲನಚಿತ್ರ (ಶಾರ್ಟ್ ಫಿಲ್ಮ್ ) ರಚನೆ ಸ್ಪರ್ಧೆಗಳು ನಡೆಸಿದ ಬಗ್ಗೆ ಸಮಸ್ತ ಇಕೆ ವಿಭಾಗದ ಅಧ್ಯಕ್ಷರಾದ ಬಹು: ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ವಿಷಾದ ವ್ಯಕ್ತ ಪಡಿಸಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.
ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ನಡೆದ ಈ ಘಟನೆಯು ಸಂಸ್ಥೆಗೆ ಕಲಂಕ ತರುವ ಶ್ರಮವಾಗಿದೆ. ಸ್ಫರ್ಧೆಗೆ ನಿಗದಿತ ವಿಷಯವನ್ನು ನೀಡಲಾಗಿತ್ತಾದರೂ ನಿಯಮಗಳನ್ನು ಪಾಲಿಸದೆ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಇತರ ಕ್ಯಾಂಪಸ್ ನ ವಿದ್ಯಾರ್ಥಿಗಳಾಗಿದ್ದಾರೆ ಇಸ್ಲಾಮಿಗೆ ವಿರುದ್ಧವಾದ ಸ್ಪರ್ಧೆಯನ್ನು ನಡೆಸಿದ್ದು, ಸಮಸ್ತದ ಆಶಯಕ್ಕೆ ನಿಲುಕದ ಕಾರ್ಯವಾಗಿದೆ ಇದು. ವಿದ್ಯಾರ್ಥಿಗಳ ಪ್ರಾಯವಾಗಿದೆ ಸಮಸ್ಯೆ, ಅವರಿಗೆ ಆವೇಶ ಉಂಟಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಿದ ತಂಙಳ್ , ಇನ್ನು ಅಂತ್ಯದಿನದ ವರೆಗೆ ಈ ಸಂಸ್ಥೆಯಲ್ಲಿ ಇಂತಹ ಘಟನೆ ಸಂಭವಿಸದು ಎಂದು ಖಚಿತಪಡಿಸಿದ್ದಾರೆ.ತೀರ್ಪುಗಾರರಾಗಿ ಆಗಮಿಸಿದ ನೂತನವಾದಿಗಳು ಈ ಘಟನೆಯನ್ನು ಪ್ರಚಾರಪಡಿಸಿದ್ದಾರೆ ಎಂದ ತಂಙಳ್, ನೂತನವಾದಿಗಳಿಗೆ ಕಡಿವಾಣ ಹಾಕಬೇಕು, ನಿಯಂತ್ರಣ ರೇಖೆಯನ್ನು ದಾಟಲು ನೂತನವಾದಿಗಳಿಗೆ ಅವಕಾಶ ನೀಡಬಾರದೆಂದೂ ಒತ್ತಿ ಹೇಳಿದರು.
Athin akiyath niday all ha
ನೂತನವಾದಿಗಳ ನೂತನ ವಾದವೇನು?
ನೀಚ ಮಾತುಗಳು ಅದು ನೀಚರಿಗೆ ಇರುವುದಾಗಿದೆ.ಎಂದು ಖುರಾನ್ ಹೇಳಿದ್ದು ಅದೆಷ್ಟು ಸತ್ಯ ಅಲ್ಲವೇ.