janadhvani

Kannada Online News Paper

ನರಿಂಗಾನ,ಜ 26: ಅಲ್ ಮದೀನಾ ಮಂಜನಾಡಿ ಸಂಸ್ಥೆಯು ಭವ್ಯ‌ ಭಾರತದ 70 ನೇ ಗಣರಾಜೋತ್ಸವವನ್ನು ಆಚರಿಸಲಾಯಿತು.

ಸಂಸ್ಥೆಯ ಸಾರಥಿ ಶೈಖುನಾ ಶರಫುಲ್ ಉಲಮಾ ರವರ ಆರ್ಶೀವಾದದೊಂದಿಗೆ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಧ್ವಜಾರೋಹಣಗೈದು ಉದ್ಘಾಟನೆ ಮಾಡಿದರು‌‌.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಅ್ ವಾ ಕಾಲೇಜು ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ ವಹಿಸಿದರು.ಅಶ್ರಫ್ ಸಖಾಫಿ ಪ್ರಾಸ್ತಾವಿಕ ಭಾಷಣವನ್ನು ಮಂಡಿಸಿದರು.

ವೇದಿಕೆಯಲ್ಲಿ ಸಿಲ್ವರ್ ಜುಬುಲಿ ಹಾಡನ್ನು ಪ್ರಕಾಶನ ಮಾಡಲಾಯಿತು.
ದಅ್ ವಾ ಕಾಲೇಜು ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ, ರಿಸಾಲ ಅಕಾಡೆಮಿ ಪ್ರಾಧ್ಯಾಪಕರಾದ ಕಬೀರ್ ಸಅದಿ, ಹಿಫ್ಳುಲ್ ಖುರ್ ಆನ್ ಕಾಲೇಜು ಪ್ರಾಧ್ಯಾಪಕರಾದ ಹಾಫಿಳ್ ಮರ್ಶದ್ ಹುಮೈದಿ, ಹಾಫಿಳ್ ಇಸ್ಮಾಯಿಲ್ ಹನೀಫಿ, ನೋರ್ತ್ ಕರ್ನಾಟಕ ಹೋಮ್ ಬದುರುದ್ದೀನ್ ಹಿಮಮಿ, ಅಬ್ರಾರ್ ಫಾಝಿಲಿ ಬಿಹಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಅದ್ ಮೊಂಟುಗೋಳಿ ನಿರೂಪಿಸಿದರು. ಬಿಶಾರತುಲ್ ಮದೀನಾ ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿ, ನೌಫಲ್ ಮಲಾರ್ ವಂದಿಸಿದರು.

error: Content is protected !! Not allowed copy content from janadhvani.com