janadhvani

Kannada Online News Paper

ಜೆಟ್ ಏರ್‌ವೇಸ್: ರಿಪಬ್ಲಿಕ್ ದಿನದ ಅಂಗವಾಗಿ ಜ.30 ರ ತನಕ ವಿಶೇಷ ದರ ಕಡಿತ

ರಿಯಾದ್: ಭಾರತದ ಅತಿ ದೊಡ್ಡ ಏರ್‌ಲೈನ್ ಕಂಪನಿಯಾದ ಜೆಟ್ ಏರ್‌ವೇಸ್, ರಿಪಬ್ಲಿಕ್ ದಿನದಂದು ವಿಶೇಷ ದರ ಕಡಿತವನ್ನು ಘೋಷಿಸಿದೆ.

ಭಾರತ, ಬ್ಯಾಂಕಾಕ್, ಕೊಲಂಬೋ, ಢಾಕಾ, ಹಾಂಗ್ಕಾಂಗ್, ಕಾಥ್ಮಂಡು ಮತ್ತು ಸಿಂಗಪುರ್ ಗಳಿಗೆ ಖರೀದಿಸುವ ಟಿಕೆಟ್ ದರಗಳಿಗೆ ಈ ಕಡಿತವನ್ನು ಪ್ರಕಟಿಸಲಾಗಿದೆ.

ಹೊಸ ಕೊಡುಗೆ ಜನವರಿ 24 ರಿಂದ 30 ರವರೆಗೆ ಲಭ್ಯವಾಗುವ ಟಿಕೆಟ್ ಗಳಲ್ಲಿ ಪ್ರೀಮಿಯರ್ ಮತ್ತು ಎಕಾನಮಿ ದರ್ಜೆಯ ಯಾತ್ರಿಕರಿಗೆ ಲಭ್ಯವಿರುತ್ತದೆ. ಏಳು ದಿನಕ್ಕೆ 50% ವರೆಗೆ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ .

ಟಿಕೆಟ್ ಗಳಿಗಾಗಿ, www.jetairways.com ಮೂಲಕ ಅಥವಾ ಜೆಟ್ ಏರ್‌ವೇಸ್ ‌ನ ಮೊಬೈಲ್ ಫೋನ್ ಅಪ್ಲಿಕೇಶನ್ ಅಥವಾ ಪ್ರಯಾಣ ಏಜೆನ್ಸಿ ಮೂಲಕ ಟಿಕೆಟ್ ಖರೀದಿ ಮಾಡುವವರಿಗೆ ಈ ವಿನಾಯಿತಿ ಲಭ್ಯವಾಗಲಿದೆ.

error: Content is protected !! Not allowed copy content from janadhvani.com