
ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಬಹರೈನ್ ಇದರ ವತಿಯಿಂದ “ಇಲೈಕ ಯಾ ರಸೂಲಲ್ಲಾಹ್” ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಮೀಲಾದ್ ಕಾನ್ಫರೆನ್ಸ್ 16- 11-2018 ರಂದು ಶುಕ್ರವಾರ ಸಂಜೆ 5 ಗಂಟೆಗೆ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಬಹು||ಅಹಮದ್ ಮುಸ್ಲಿಯಾರ್ ಗಟ್ಟಮನೆ ರವರು ದುಃಅ ನೆರವೇರಿಸಿದರು. ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಸ್ವಾಗತ ಭಾಷಣವನ್ನು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು| ಅಬೂಬಕ್ಕರ್ ಮದನಿ ಉಸ್ತಾದ್ ರವರು ನೆರವೇರಿಸಿದರು. ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್.ಎಂ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ಅಲ್ ಖಾದಿಸ ಅಕಾಡೆಮಿ ಚೇರ್ಮ್ಯಾನ್ ಬಹು| ಹಜ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ, ಕೆಸಿಎಫ್ ಅಂತರ್ ರಾಷ್ಟ್ರೀಯ ಕೌನ್ಸಿಲ್ ಎಜುಕೇಷನ್ ಅಧ್ಯಕ್ಷ ಡಿ ಪಿ ಸಖಾಫಿ ಬೈತಾರ್ ,ಎಜುಕೇಶನ್ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ , ಕೆ.ಸಿ.ಎಫ್ ಸೌದಿ ಖಜಾಂಜಿ ಅಬೂಬಕ್ಕರ್ ಹಾಜಿ ರೈಸ್ಕೊ ಆಗಮಿಸಿದ್ದರು. ಮುಖ್ಯಪ್ರಭಾಷಣಕಾರರಾಗಿ ಆಗಮಿಸಿದ ಖ್ಯಾತ ವಾಗ್ಮಿ , ಲುಕ್ಮಾನುಲ್ ಹಕೀಂ ಸಖಾಫಿ ಫುಲ್ಲಾರರವರು , ಪ್ರವಾದಿ ಜೀವನ ದರ್ಶನವು ಮನುಕುಲಕ್ಕೆ ಮಾದರಿ ಯಾಗಿದೆ , ಪಾರತ್ರಿಕ ವಿಜಯಗಳಿಸಲು ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಬಹರೈನ್ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಮೆಟೆಲ್ಕೊ ರಝಾಕ್ ಹಾಜಿ , ಶೈಖ್ ಹಸ್ಸನ್ ಕಮಾಲ್, ಕೆ ಸಿ.ಎಫ್ ಬಹರೈನ್ ಐ ಎನ್ ಸಿ ಪ್ರತಿನಿಧಿಗಳಾದ ಅಲಿ ಮುಸ್ಲಿಯಾರ್ ಕೊಡಗು, ಜಮಾಲುದ್ದೀನ್ ವಿಟ್ಟಲ್, ಫಕ್ರುದ್ದೀನ್ ಹಾಜಿ ಸುಳ್ಯ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಝೀಝ್ ಸುಳ್ಯ,ಅಲ್ಲದೆ ಹಲವಾರು ಉಲಮಾಗಳು,ಧಾರ್ಮಿಕ ಹಾಗೂ ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.
ಮಕ್ಕಳಿಗಾಗಿ ಕಿಡ್ಸ್ ಮೀಲಾದ್ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು. ಕೆ.ಸಿ.ಎಫ್ ಬಹರೈನ್ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಸಮದ್ ಉಜಿರೆಬೆಟ್ಟು , ಕನ್ವೀನರ್ಸ್ ಇಕ್ಬಾಲ್ ಮಂಜನಾಡಿ, ಹನೀಫ್ ಗುರುವಾಯನಕೆರೆಯವರು ಕಾರ್ಯಕ್ರಮ ದ ಉಸ್ತುವಾರಿ ವಹಿಸಿದ್ದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಎಜುಕೇಶನ್ ವಿಭಾಗದ ಚೇರ್ಮನ್ ಕಲಂದರ್ ಷರೀಫ್ ರವರು ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಅಝ್ಹರ್ ತಂಙಳ್ ರವರ ಬುರ್ದಾಆಲಾಪನೆ ಯೊಂದಿಗೆ ಸಮಾವೇಶವು ಕೊನೆಗೊಂಡಿತು.
ಕೆ.ಸಿ.ಎಫ್ ಪಬ್ಲಿಕೇಶನ್ ವಿಂಗ್ ಬಹರೈನ್















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ