ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಬಹರೈನ್ ಇದರ ವತಿಯಿಂದ “ಇಲೈಕ ಯಾ ರಸೂಲಲ್ಲಾಹ್” ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಮೀಲಾದ್ ಕಾನ್ಫರೆನ್ಸ್ 16- 11-2018 ರಂದು ಶುಕ್ರವಾರ ಸಂಜೆ 5 ಗಂಟೆಗೆ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಹು||ಅಹಮದ್ ಮುಸ್ಲಿಯಾರ್ ಗಟ್ಟಮನೆ ರವರು ದುಃಅ ನೆರವೇರಿಸಿದರು. ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಸ್ವಾಗತ ಭಾಷಣವನ್ನು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು| ಅಬೂಬಕ್ಕರ್ ಮದನಿ ಉಸ್ತಾದ್ ರವರು ನೆರವೇರಿಸಿದರು. ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್.ಎಂ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಬಹರೈನ್ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಮೆಟೆಲ್ಕೊ ರಝಾಕ್ ಹಾಜಿ , ಶೈಖ್ ಹಸ್ಸನ್ ಕಮಾಲ್, ಕೆ ಸಿ.ಎಫ್ ಬಹರೈನ್ ಐ ಎನ್ ಸಿ ಪ್ರತಿನಿಧಿಗಳಾದ ಅಲಿ ಮುಸ್ಲಿಯಾರ್ ಕೊಡಗು, ಜಮಾಲುದ್ದೀನ್ ವಿಟ್ಟಲ್, ಫಕ್ರುದ್ದೀನ್ ಹಾಜಿ ಸುಳ್ಯ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಝೀಝ್ ಸುಳ್ಯ,ಅಲ್ಲದೆ ಹಲವಾರು ಉಲಮಾಗಳು,ಧಾರ್ಮಿಕ ಹಾಗೂ ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಎಜುಕೇಶನ್ ವಿಭಾಗದ ಚೇರ್ಮನ್ ಕಲಂದರ್ ಷರೀಫ್ ರವರು ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ಅಝ್ಹರ್ ತಂಙಳ್ ರವರ ಬುರ್ದಾಆಲಾಪನೆ ಯೊಂದಿಗೆ ಸಮಾವೇಶವು ಕೊನೆಗೊಂಡಿತು.
ಕೆ.ಸಿ.ಎಫ್ ಪಬ್ಲಿಕೇಶನ್ ವಿಂಗ್ ಬಹರೈನ್