ಮಕ್ಕಾ: ಜುಮುಅ ಪ್ರಾರ್ಥನೆಗೆ ಎರಡೂ ಹರಮ್ಗಳಲ್ಲಿ ಲಕ್ಷಗಟ್ಟಲೆ ಹಾಜಿಗಳು ಭಾಗವಹಿಸಿದರು.ಭಾರೀ ಬಿಸಿಲಿನ ಹೊರತಾಗಿಯೂ, ಗುರುವಾರ ರಾತ್ರಿಯಿಂದ ಯಾತ್ರಾರ್ಥಿಗಳ ಗುಂಪುಗಳು ಜುಮುಆಗಾಗಿ ಹರಮ್ಗಳತ್ತ ದಾವಿಸಿದವು.
ಮಕ್ಕಾದ ಹರಮ್ನಲ್ಲಿ ಪ್ರಾರ್ಥನೆಗೂ ಮುಂಚಿತವಾಗಿ ಗೇಟ್ಗಳಲ್ಲಿ ನಿಯಂತ್ರಣ ಏರ್ಪಡಿಸಲಾಗಿತ್ತು. ಮಸೀದಿಯ ಎಲ್ಲಾ ಅಂತಸ್ತುಗಳೂ ತುಂಬಿ ತುಳುಕಿವೆ.
ಪವಿತ್ರ ಹಜ್ಗೆ ದಿನಗಳು ಮಾತ್ರ ಉಳಿದಿರುವಾಗ 11,41,138 ಯಾತ್ರಿಗಳು ಪವಿತ್ರ ಭೂಮಿಗೆ ಆಗಮಿಸಿರುವುದಾಗಿ ಸೌದಿ ಪಾಸ್ಪೋರ್ಟ್ ಸಚಿವಾಲಯ ತಿಳಿಸಿದೆ.
ಅತ್ಯಧಿಕ ಯಾತ್ರಿಕರು ಇಂಡೋನೇಷ್ಯಾದಿಂದ ಬಂದವರಾಗಿದ್ದಾರೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ನಂತರದ ಸ್ಥಾನದಲ್ಲಿದೆ
ವಿಮಾನ ಮಾರ್ಗವಾಗಿ ಒಟ್ಟು 10,75,474 ಯಾತ್ರಿಗಳು ಪವಿತ್ರ ಭೂಮಿಗೆ ಆಗಮಿಸಿದರು ಮತ್ತು ಹಡಗುಗಳ ಮೂಲಕ 12,026 ಯಾತ್ರಿಕರು, ರಸ್ತೆ ಮಾರ್ಗವಾಗಿ 53,638 ಮಂದಿ ವಿಶುದ್ದ ಭೂಮಿಗೆ ತಲುಪಿದರು.
ಭಾರತದ ಹಜ್ ಮಿಷನ್ ಪ್ರಕಾರ ಬುಧವಾರದ ವರೆಗೆ ಭಾರತದಿಂದ 1,04,090 ಯಾತ್ರಿಕರು ಆಗಮಿಸಿರುವುದಾಗಿ ತಿಳಿದು ಬಂದಿದೆ.
ಹಜ್ ನಿರ್ವಹಣಾ ಅನುಮತಿಯಿಲ್ಲದೆ ಮಕ್ಕಾಗೆ ಪ್ರವೇಶಿಸಲು ಪ್ರಯತ್ನಿಸಿದ ಒಟ್ಟು 1,88,464 ವ್ಯಕ್ತಿಗಳನ್ನು ಹರಮ್ ಪ್ರವೇಶದ್ವಾರದಿಂದಲೇ ಹಿಂದಕ್ಕೆ ಕಳುಹಿಸಲಾಗಿದೆ. ಮಕ್ಕಾದಲ್ಲಿ ಅನುಮತಿಯಿಲ್ಲದೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರವೇಶ ದ್ವಾರಗಳನ್ನು ಭದ್ರತಾ ಅಧಿಕಾರಿಗಳು ನಿರೀಕ್ಷಣೆಯಲ್ಲಿರಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
ಇರಾನ್ ಒಪ್ಪಂದ ಪಾಲಿಸದಿದ್ದರೆ ನೆತ್ತಿ ಮೇಲೆ ಬಾಂಬ್ ವರ್ಷಣ- ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ಇರಾನ್-ಯುಎಸ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ- ಇರಾನ್ನಿಂದಲೂ ದೃಢೀಕರಣ
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
“ಬೆಲೆ ಏರಿಕೆ ನನಗೆ ಇಷ್ಟ”-ಇರಾನ್ ಯುದ್ಧದ ಕಾರಣದಿಂದ ಉಂಟಾದ ಬೆಲೆ ಏರಿಕೆಯ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ