ಸೇಂಟ್ ಲೂಯಿಸ್: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಪ್ರಸಾಧನ ಪೌಡರ್ ಬಳಸಿದ ಕಾರಣಕ್ಕಾಗಿಯೇ ಕ್ಯಾನ್ಸರ್ ಬಂದಿದೆ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದ 22 ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಪರಿಹಾರವಾಗಿ 31,960 ಕೋಟಿ (4.7 ಬಿಲಿಯನ್ ಡಾಲರ್) ಪಾವತಿಸುವಂತೆ ಅಮೆರಿಕ ನ್ಯಾಯಾಲಯವು ಆದೇಶ ನೀಡಿದೆ.
ಕಂಪನಿಯ ಪೌಡರ್ ಬಳಕೆಯಿಂದ ಕನ್ಲಾರ್ ಧೂಳು ದೇಹ ಸೇರಿ ಗರ್ಭಾಶಯ ಕ್ಯಾನ್ಸರ್‌ಗೆ ತುತ್ತಾದೆವು ಎಂದು ಈ ಮಹಿಳೆಯರು ನ್ಯಾಯಾಲಯದಲ್ಲಿ ದೂರಿದ್ದರು. ಆರು ವಾರಗಳ ಕಾಲ ವಿಚಾರಣೆ ನಡೆಸಿದ ಸೇಂಟ್ ಲೂಯಿಸ್ ಸರ್ಕ್ಯೂಟ್ ನ್ಯಾಯಾಲಯವು ಅತ್ಯಂತ ಬೃಹತ್ ಮೊತ್ತದ ಪರಿಹಾರ (ಆತ್ಮಸಾಕ್ಷಿಗೆ ವಿರುದ್ಧ ಎಸಗಿದ ಅಪರಾಧಕ್ಕೆ ನೀಡುವ ಪರಿಹಾರ) ನೀಡುವಂತೆ ಸೂಚಿಸಿದೆ.
‘ಸಂಸ್ಥೆಯ ಯಾವುದೇ ಉತ್ಪನ್ನಗಳು ಕನ್ಲಾರ್ ಧೂಳು ಹೊಂದಿಲ್ಲ, ಅಲ್ಲದೇ ಗರ್ಭಾಶಯ ಕ್ಯಾನ್ಸರ್‌ಗೂ ಕಾರಣವಾಗುವುದಿಲ್ಲ’ ಎಂದು ಸಂಸ್ಥೆಯ ವಕ್ತಾರ ಕೆರೊಲ್ ಗುಡ್‌ರಿಚ್ ಅವರು ತಿಳಿಸಿದ್ದಾರೆ.
‘ಪ್ರಕರಣದ ವಿಚಾರಣೆಯೂ ಸರಿಯಾಗಿ ನಡೆದಿಲ್ಲ, ಮಿಸ್ಸಾರಿಯಲ್ಲಿ ಪ್ರಕರಣ ದಾಖಲಿಸಿರುವ ಅನೇಕ ಮಹಿಳೆಯರು ಇಲ್ಲಿ ನೆಲೆಸಿಲ್ಲ, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ’ ಎಂದು ಅವರು ತಿಳಿಸಿದರು.
‘ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯರ ಗರ್ಭಾಶಯದಲ್ಲಿ ಪೌಡರ್‌ನ ಕಣಗಳು ಹಾಗೂ ಕನ್ಲಾರ್ ಧೂಳಿನ ಅಂಶ ಪತ್ತೆಯಾಗಿದೆ. ವೈದ್ಯಕೀಯ ತಜ್ಞರು ಕೂಡ ಇದನ್ನು ದೃಢಪಡಿಸಿದ್ದಾರೆ’ ಸಂತ್ರಸ್ತ ಮಹಿಳೆಯರ ಪರ ವಾದ ಮಂಡಿಸಿದ ಮಾರ್ಕ್ ಲೆನಿಯರ್ ತಿಳಿಸಿದ್ದಾರೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಬಳಸಿದ್ದರಿಂದ ಗರ್ಭಾಶಯ ಕ್ಯಾನ್ಸರ್‌ಗೆ ತುತ್ತಾಗಿದ್ದೇವೆ ಎಂದು ಕಂಪನಿ ವಿರುದ್ಧ 9 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ, ಆದರೆ ಕಂಪನಿ ಈ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಮಾತ್ರ ಭಾರಿ ದಂಡ ತೆರುವಂತಾಗಿದೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ