–ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ)
🔘ಅಂದು ದ್ಸುಲ್‌ಹಜ್ ಒಂಭತ್ತು.
(ದ್ಸುಲ್‌ಹಜ್ ಇಸ್ಲಾಮಿಕ್ ಕ್ಯಾಲೆಂಡರಿನ 12ನೇ ತಿಂಗಳು) ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಸ್ವಹಾಬಿಗಳು ಮತ್ತು ಮುಹಮ್ಮದ್ ﷺ ಅವರು ಶ್ವೇತ ಉಡುಪಿನಲ್ಲಿ ಅರಫಾ ಮಹಾ ಮೈದಾನದಲ್ಲಿ ಹಜ್‌ನ ಪ್ರಮುಖ ಕರ್ಮವನ್ನು ನೆರವೇರಿಸಲು ಸಂಗಮಿಸಿದರು. ಮುಹಮ್ಮದ್ ﷺಅವರು ಜಬಲುರಹ್ಮ ( ಅನುಗ್ರಹೀತ ಬೆಟ್ಟ)ದ ಮೇಲೇರಿ ವಿದಾಯ ಭಾಷಣಕ್ಕೆ ಅಣಿಯಾದರು. ನೆರೆದಿದ್ದವರಿಗೆ ಸಲಾಮ್ ಹೇಳಿ ಅಲ್ಲಾಹನನ್ನು ಸ್ತುತಿಸುವ ಮೂಲಕ ಭಾಷಣ ಆರಂಭಿಸಿದರು.
ಅದು ಭೂಲೋಕದ ಆರಂಭದಿಂದ ಹಿಡಿದು ಅಂತ್ಯದವರೆಗಿನ, ಜನನದಿಂದ ಮರಣವರೆಗಿನ, ಖಬರ್‌ನಿಂದ ಮಹ್ಶರಾವರೆಗಿನ ಸರ್ವಸ್ವವನ್ನೂ ಒಳಗೊಂಡ ರೋಚಕ ಭಾಷಣವಾಗಿತ್ತು. ಆ ಭಾಷಣದಲ್ಲಿ ತಾನು ಮರಣಕ್ಕೆ ಶರಣಾಗುವ ಮುನ್ನುಡಿ ಕೂಡ ಇದ್ದವು. ಆ ಭಾಷಣದ ತಾತ್ಪರ್ಯವನ್ನು ಅರ್ಥೈಸಿಕೊಂಡ ಸ್ವಹಾಬಿಗಳಿಗೆ ಭಾಷಣ ಕೇಳುತ್ತಿದ್ದಂತೆ ಅಳು ಉಮ್ಮಳಿಸಿ ಬರುತ್ತಿದ್ದವು. ಕಣ್ಣುಗಳು ತೇವಗೊಂಡಿದ್ದವು. ಮುಖದಲ್ಲಿ ದುಃಖದ ಛಾಯೆ ಆವರಿಸಿತು.
ಅರಫಾ ಮೈದಾನವಿಡೀ ಕಣ್ಣೀರ ಹನಿಗಳು..
ಸತ್ಯದೆಡೆಡೆ ಆಹ್ವಾನಿಸುವ ನಬಿಯವರ ವಿದಾಯ ಭಾಷಣದಲ್ಲಿ ಎಲ್ಲವೂ ಇತ್ತು.
ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ ಎಂಬ ತಾಕೀತು. ಕೊಲೆ, ಸುಳ್ಳು, ಸುಲಿಗೆ, ಬಡ್ಡಿ ವ್ಯವಹಾರ,ಕಂದಾಚಾರ, ಮದ್ಯಪಾನ, ವ್ಯಭಿಚಾರ, ಮೋಸ ವಂಚನೆಯಿಂದ ದೂರ ಇರಬೇಕೆಂಬ ಸಂದೇಶ. ಪತಿಗೆ ಪತ್ನಿಯೊಂದಿಗಿನ ಹಕ್ಕು, ಪತ್ನಿಗೆ ಪತಿಯೊಂದಿಗಿನನ ಹಕ್ಕು, ಪಾಲಕರಿಗೆ ಮಕ್ಕಳ ಮೇಲಿನ ಹಕ್ಕು, ವಾರಿಸು ಸೊತ್ತಿನ ಪಾಲು, ಸಾಲ ಮರು ಪಾವತಿ, ಸಾಲ ರೂಪದಲ್ಲಿ ಪಡೆದ ವಸ್ತುಗಳ ಹಿಂದಿರುಗಿಸುವಿಕೆ, ಅಪರಾಧಕ್ಕೆ ಅಪರಾಧ ಎಸೆಗಿದವನೇ ಹೊರತು ಬೇರೆ ಯಾರೂ ಹೊಣೆಯಲ್ಲ ಎಂಬ ಕಟ್ಟಪ್ಪಣೆಯನ್ನೂ ಒಳಗೊಂಡಿತ್ತು. ನಾನು ನಿಮ್ಮ ಅಂತಿಮ ಪ್ರವಾದಿ ಹಾಗೂ ನನ್ನ ಉಮ್ಮತ್ ಕಟ್ಟ ಕಡೆಯ ಸಮುದಾಯ ಎಂದೂ, ದಿನಕ್ಕೆ ಐದು ಬಾರಿ ನಮಾಝ್ ನಿರ್ವಹಿಸಿರಿ, ರಮಳಾನ್ ತಿಂಗಳಲ್ಲಿ ಉಪವಾಸ ಆಚರಿಸಿರಿ, ಸಂಪತ್ತಿನ ಮೇಲಿನ ಝಕಾತ್, ಹಜ್ ಯಾತ್ರೆ ಕೈಗೊಳ್ಳಿರಿ ಹೀಗೆ.. ಎಂಬಿತ್ಯಾದಿಗಳು ನಬಿಯವರ ವಿದಾಯ ಭಾಷಣದ ಹೈಲೆಟ್ಸ್‌ಗಳಾಗಿದ್ದವು.
ಇದಾದ ಬಳಿಕ ನಬಿಯವರು ಬದುಕಿದ್ದು ಕೇವಲ ಮೂರು ತಿಂಗಳು ಮಾತ್ರ. ತಮ್ಮ 63 ನೇ ವಯಸ್ಸಿನಲ್ಲಿ ಇಸ್ಲಾಮನ್ನು ಪೂರ್ತಿಗೊಳಿಸಿ ರಬೀವುಲ್ ಅವ್ವಲ್ 12 ರಂದು ಭೌತಿಕವಾಗಿ ನಮ್ಮನ್ನಗಲಿದರು.
ಅರಫಾ ಮೈದಾನವು ಮಕ್ಕಾ ಗ್ರಾಂಡ್ ಮಸ್ಜಿದ್‌ನಿಂದ 24 ಕಿ.ಮೀ ದೂರಲ್ಲಿದೆ.
















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ