ದುಬೈ:ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ತನ್ನ ಐದು ಸಂವತ್ಸರಗಳನ್ನು ಪೂರೈಸಿದ ಸವಿನೆನಪಿನ ಸಂದರ್ಭದಲ್ಲಿ ಯುಎಇ ರಾಷ್ಟ್ರೀಯ ಸಮಿತಿ ಘೋಷಿಸಲಾಗಿದ್ದ ಐದು ಮಹತ್ತರವಾದ ಕಾರ್ಯಕ್ರಮಗಳಲ್ಲೊಂದಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧಿಕೃತ ಘೋಷಣೆಯನ್ನು ಕಳೆದ ಜೂನ್ 29 ರಂದು ಅಬುಧಾಬಿಯಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರು ಮತ್ತು ICF, RSC ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಿರ್ವಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮ ನಿರ್ದೇಶನ ಸಮಿತಿ ಅಧ್ಯಕ್ಷರಾದ ಜನಾಬ್ ಶೇಖ್ ಭಾವ ಮಂಗಳೂರುರವರು ಕಾರ್ಯಕ್ರಮವು ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಊರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಮದುವೆಯ ಸಂಪೂರ್ಣ ಖರ್ಚನ್ನು KCF ವಹಿಸುವುದರೊಂದಿಗೆ ವಧುವಿಗೆ ಐದು ಪವನ್ ಚಿನ್ನಾಭರಣ ಮತ್ತು ಜೋಡಿಗಳ ಮದುವೆ ವಸ್ತ್ರಗಳನ್ನೂ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿ ಮಾತನಾಡಿದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲರವರು ಕೆ.ಸಿ.ಎಫ್ ಸಮಿತಿ ಘೋಷಿಸಲಾಗಿದ್ದ ಇನ್ನಿತರ ಯೋಜನೆಗಳಾದ ಐದು ಸ್ಥಳಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಐದು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಎಎಸ್ ಅಥವಾ ಐಪಿಎಸ್ ನಂತಹ ನಾಗರಿಕಾ ಸೇವಾ ಪರೀಕ್ಷೆಗೆ ತರಬೇತಿಗೆ ಬೇಕಾಗುವ ಸಹಾಯ ಕಲ್ಪಿಸಿಕೊಡುವ ಯೋಜನೆ ಮತ್ತು ಯುಎಇಯಲ್ಲಿ ಕನ್ನಡಿಗರಿಗಾಗಿ ಬ್ರಹತ್ ಕೆಸಿಎಫ್ ಮದ್ರಸ ಎಂಬ ಪದ್ದತಿಗಳನ್ನು 2018ರಲ್ಲೇ ಪೂರೈಸಲು ಶ್ರಮಿಸುವುದಾಗಿ ತಿಳಿಸಿದರು.
ಪದ್ದತಿಗಳೊಂದಾದ ಕರ್ನಾಟಕ ಫ್ಯಾಮಿಲಿ ಫೆಸ್ಟ್- 2018 ಅದ್ದೂರಿಯಾಗಿ ಕಳೆದ ಮಾರ್ಚ್ 30 ರಂದು ಅಜ್ಮಾನಿನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಮೈದಾನದಲ್ಲಿ ವಿವಿಧ ಸ್ಪರ್ಧೆಗಳ ಕಲರವದೊಂದಿಗೆ ಕಾರ್ಯಕರ್ತರನ್ನು ರಂಜಿಸಿದ್ದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಕ್ಷಿಯಾಗಿತ್ತು ಎಂಬುದನ್ನು ನೆನಪಿಸಿಕೊಂಡರು
ಸಾಮೂಹಿಕ ವಿವಾಹದ ಅರ್ಜಿ ಪಡೆಯಲು ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧೀನದ ವಿವಿಧ ಘಟಕಗಳ ಸಾಂತ್ವನ ವಿಭಾಗ ಅಥವಾ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯವರನ್ನು ವಾಟ್ಸಪ್ಪ್ (00971557687004) ನಂಬರಿನಲ್ಲಿ ಸಂಪರ್ಕಿಸಬಹುದು















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ