ಪುತ್ತೂರು: ‘ ಅಶ್ರಫ್ ‘ ಹೆಸರಿನ ವ್ಯಕ್ತಿಗಳ ಕರ್ನಾಟಕ ಒಕ್ಕೂಟದ ಸಭೆ ಇಂದು ಅಧ್ಯಕ್ಷರಾದ ಅಶ್ರಫ್ ಕಲ್ಲೇಗ ಅವರ ನೇತೃತದಲ್ಲಿ ಪುತ್ತೂರಿನ ಗೋಲ್ಡನ್ ಗೇಟ್ ಹಾಲ್ ನಲ್ಲಿ ನಡೆಯಿತು. ಸಭೆಯನ್ನು ಅಶ್ರಫ್ ಬಾಖವಿ ಚಾಪಲ್ಲ ಅವರು ದುವಾ ಮೂಲಕ ನೆರವೇರಿಸಿ, ಅಶ್ರಫ್ ಎಂಬ ಹೆಸರಿನ ಮಹತ್ವ ಮತ್ತು ಅತ್ಯಂತ ಉನ್ನತೀಯನು ಎಂಬ ಇಸ್ಲಾಮೀ ಅರ್ಥೈಸುವಿಕೆ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿ ಯಾಗಿದ್ದ ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ ‘ ಅಶ್ರಫ್ ‘ ನಾಮಾಂಕಿತ ಜಿಲ್ಲಾವಾರು ವ್ಯಕ್ತಿಗಳನ್ನು ಹುಡುಕಿ ಒಕ್ಕೂಟದಲ್ಲಿ ಸೇರ್ಪಡಿಸಿ ಜಿಲ್ಲಾ ಮಟ್ಟದ ಕಾರ್ಯಕ್ರಮ ರೂಪಿಸಿ ಸಮಾಜಕ್ಕೆ ಪೂರಕ ಸಹಾಯವಾಗುವ ಕಾರ್ಯ ಯೋಜನೆ ರೂಪೀಕರಿಸಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಕೇರಳ ರಾಜ್ಯ ಅಶ್ರಫ್ ಒಕ್ಕೂಟದ ಮುಖ್ಯಸ್ಥರಾದ ಅಶ್ರಫ್ ಕುಂಞಪ್ಪ, ಅಶ್ರಫ್ ಸೆಂಚುರಿ ಮಂಜೇರಿ ಮಂಡಲ, ಮತ್ತು ಎಮ್ ಕೆ ಎಮ್ ಅಶ್ರಫ್ ಕರ್ನೂರು ಮತ್ತು ಕರ್ನಾಟಕದ ಅಶ್ರಫ್ ಆಲಿ, ಸೋಮಾವಾರ ಪೇಟೆ ಕೊಡಗು, ಅಶ್ರಫ್ ಬಿಳಿಗೆರೆ ಕೊಡಗು. ಅಶ್ರಫ್ ಸಿ. ಎ.ಬಾವ, ಅಶ್ರಫ್ ಸಿಟಿ, ಅಶ್ರಫ್ ಕೊಲ್ಲಮುಡಿ, ಅಶ್ರಫ್ ವಿ. ಏಚ್.ವಿಟ್ಲ, ಅಶ್ರಫ್ ಶೇಡಿ ಗುಂಡಿ, ಅಶ್ರಫ್ ಕಲ್ಲುಗುಂಡಿ ಸುಳ್ಯ, ಅಶ್ರಫ್ ಮಂಚಿ, ಅಶ್ರಫ್ ಕೌನ್ಸಿಲರ್ ವಿಟ್ಲ, ಅಶ್ರಫ್ ಕಳಂಜ ಬೆಳ್ಳಾರೆ.ಅಶ್ರಫ್ ಜೆಸಿಬಿ ಮುಕ್ವೆ. ಅಶ್ರಫ್ ಸಿ. ಎಮ್ ಉಳ್ಳಾಲ, ಅಶ್ರಫ್ ಮಾಸ್ಟರ್, ಅಶ್ರಫ್ ಎಟಿಎಂ, ಅಶ್ರಫ್ ಪರ್ತಿಪ್ಪಾಡಿ, ಅಶ್ರಫ್ CH ಪುತ್ತೂರು, ಅಶ್ರಫ್ ಕಳೆಂಬಿ, ಅಡ್ವೊಕೇಟ್ ಪತ್ರಕರ್ತ ಮೊಹಮ್ಮದ್ ಹನೀಫ್. ಯು. ಮತ್ತಿತರರು ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಅಶ್ರಫ್ ಆಗ್ನಾಡಿ ವಕೀಲರು ಕಾರ್ಯಕ್ರಮ ನಿರೂಪಿಸಿದರು.
ಅಶ್ರಫ್ ಕರ್ನಾಟಕ ಒಕ್ಕೂಟ, ಎಂಬುದು ಕರ್ನಾಟಕ ರಾಜ್ಯದ ಅಶ್ರಫ್ ನಾಮಾಂಕಿತ ವ್ಯಕ್ತಿಗಳ ಒಟ್ಟು ಸೇರುವಿಕೆ ಮತ್ತು ಸೇವಾ ಉದ್ದೇಶ ಹೊಂದಿದ್ದು, ನೆರೆರಾಜ್ಯ ಕೇರಳದಲ್ಲಿ ಅಶ್ರಫ್ ಕೂಟಾಯಿಮಾ ಎಂಬ ಹೆಸರಲ್ಲಿ ಹಿಂದಿನ ವರ್ಷಗಳಲ್ಲಿ ಸಮಾವೇಶ ನಡೆಸಿ ಯಶಸ್ವಿ ಪ್ರಯೋಗ ನಡೆಸಿದ್ದು ಇಲ್ಲಿ ಗಮನಾರ್ಹ ಎಂದು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪ ವಾಗಿದೆ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ