“ಪ್ರವಾದಿ ﷺ ರವರು ಕಾಲಾತೀತ ಮಾರ್ಗದರ್ಶಿ” ಎಂಬ ಘೋಷ ವಾಕ್ಯದೊಂದಿಗೆ ಪ್ರವಾದಿ ﷺ ರವರ 1500 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆಸಿಎಫ್ ರಫಾ ಸೆಕ್ಟರ್ ವತಿಯಿಂದ ಕೆಎಂಸಿಸಿ ಆಡಿಟೋರಿಯಂ ಸಭಾಂಗಣ ರಫಾದಲ್ಲಿ ನಡೆದ ಬೃಹತ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಸಲೀಂ ಹಾಜಿ ಕೆಸಿ ರೋಡ್ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ನಬೀಲ್ ಪಡುಬಿದ್ರೆ ಖಿರಾಅತ್ ಪಠಿಸಿದರು.
ಐಸಿಎಫ್ ನಾಯಕರಾದ ಅಝ್ಹರ್ ತಂಙಳ್ ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಬೂಬಕರ್ ಮದನಿ ಉಸ್ತಾದರು ಪ್ರವಾದಿ ﷺ ರವರಿಗೆ ಅಲ್ಲಾಹು ನೀಡಿದ ಜ್ಞಾನದ ಆಳವನ್ನು ವಿವರಿಸಲು ಸಾಧ್ಯವಿಲ್ಲ. ತನ್ನ ಸ್ವಂತ ಶರೀರಕ್ಕಿಂಲೂ ಮಿಗಿಲಾಗಿ ಪ್ರವಾದಿ ﷺ ರನ್ನು ಪ್ರೀತಿಸಿದರೆ ಮಾತ್ರ ಪರಿಪೂರ್ಣ ಸತ್ಯ ವಿಶ್ವಾಸಿಯಾಗುವುದು. ಪ್ರವಾದಿ ﷺ ರವರ ಚರ್ಯೆಯನ್ನು ನಮ್ಮ ಜೀವನದಲ್ಲಿ ಅವಳಡಿಸಿ ಕೊಳ್ಳಬೇಕು. ಹಝ್ರತ್ ಅಬೂಬಕರ್ ಸಿದ್ದೀಖ್ رضي الله عنه ರವರು ಹಿಜ್ರಾ ಪ್ರಯಾಣದ ವೇಳೆ ಸೌರ್ ಗುಹೆಯಲ್ಲಿ ಪ್ರವಾದಿ ﷺ ರೊಂದಿಗೆ ತೋರಿದ ಅದಮ್ಯ ಪ್ರೇಮದ ಘಟನೆಯನ್ನು ಮದನಿ ಉಸ್ತಾದರು ಸವಿಸ್ತಾರವಾಗಿ ವಿವರಿಸಿದರು.
ಡಿಕೆಯಸ್ಸಿ ಅಧ್ಯಕ್ಷರಾದ ಮಜೀದ್ ಸಅದಿ ಪೆರ್ಲ, ಕೊಡಗು ಸುನ್ನೀ ಜಮಾಅತ್ ಅಧ್ಯಕ್ಷರಾದ ಮಜೀದ್ ಮದಾಪುರ,
ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ಕಾರ್ಯಕ್ರಮಕ್ಕೆ ಶುಭ ಹಾರೖಸಿದರು.
ಐಸಿಎಫ್ ನಾಯಕರಾದ ಅಝ್ಹರ್ ತಂಙಳ್, ಐಸಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖಲಂದರ್ ಉಸ್ತಾದ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಬೂಬಕರ್ ಮದನಿ ಉಸ್ತಾದ್, ಐಸಿ ಎಡ್ಮಿನ್ ವಿಭಾಗದ ಕಾರ್ಯದರ್ಶಿ ಫೖಝಲ್ ಕೃಷ್ಣಾಪುರ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸ್ವಲಿಹಾ ಹನೀಫಿ ಸುನ್ನಮೂಲೆ ದುಆ ನೆರವೇರಿಸಿದರು. ಸ್ವಾಗತ ಸಮಿತಿ ಚೖರ್ಮಾನ್ ಔಫು ಸಅದಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಕೆಸಿಎಫ್ ರಾಷ್ಟ್ರೀಯ, ಝೋನಲ್, ಸೆಕ್ಟರ್, ಯೂನಿಟ್ ಗಳ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ