janadhvani

Kannada Online News Paper

ಅಲ್ ಮದೀನದಲ್ಲಿ ‘ದಿಲ್ ಕೀ ಆಝಾದಿ’- ಸ್ವಾತಂತ್ರ್ಯ ಸಂಭ್ರಮ

ನರಿಂಗಾನ: ಅಲ್ ಮದೀನ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ, ಝೀಕ್ಯೂ ಪ್ರಿಸ್ಕೂಲ್, ಪಿಯು ಹಾಗೂ ಡಿಗ್ರಿ ಕಾಲೇಜುಗಳ ಜಂಟಿ ಆಶ್ರಯದಲ್ಲಿ ‘ ದಿಲ್ ಕೀ ಆಝಾದಿ’ ಧ್ಯೇಯ ವಾಕ್ಯದಡಿಯಲ್ಲಿ 79 ನೇ ಸ್ವಾತಂತರಿಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ರೌಳಾ ಮದೀನಾದ ನಿರ್ದೇಶಕ ಮುಹಮ್ಮದ್ ಕುಂಞಿ ಅಮ್ಜದಿ ಧ್ವಜಾರೋಹಣ ಗೈದರು. ನರಿಂಗಾನ ಪಂಚಾಯತ್ ಅಧ್ಯಕ್ಷ ನವಾಝ್ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿಕ್ ಡೈರೆಕ್ಟರ್ ಅಬುಸಾಲಿಹ್ ಅಝ್ಹರಿ, ಮುನೀರ್ ಸಖಾಫಿ ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ಆಲಂ ರೈಫ್ ಮತ್ತು ಮುಹಮ್ಮದ್ ಇಶಾನ್ ಭಾಷಣ ಮಾಡಿದರು.

ವಿದ್ಯಾರ್ಥಿಗಳಿಂದ ದೇಶಭಕ್ತಿ ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಬಿಡುಗಡೆಗೊಂಡ ಕಿಡ್ಸ್ ಗಾರ್ಡನ್ ಬ್ಲಾಕ್ ವಿದ್ಯಾರ್ಥಿಗಳ ಹಸ್ತಲಿಖಿತ ಮ್ಯಾಗಜಿನ್ ಗಮನಸೆಳೆಯಿತು.

ಉಪನ್ಯಾಸಕ ಅಬ್ದುಲ್ ರಝಾಕ್ ಮಾಸ್ಟರ್, ಸದರ್ ಉಸ್ತಾದ್ ಅಬೂಬಕರ್ ಮದನಿ ಪಡಿಕ್ಕಲ್, ಕನ್ನಡ ಮಾಧ್ಯಮ ಶಾಲಾ ಮುಖ್ಯ ಅಧ್ಯಾಪಕ ಮುಹಮ್ಮದ್ ಸರ್ ಸಂದೇಶ ನೀಡಿದರು. ಶಾಲಾ ಪ್ರಾಂಶುಪಾಲ ಮನ್ಸೂರ್ ಹಿಮಮಿ ಸ್ವಾಗತಿಸಿದರು. ವಿದ್ಯಾರ್ಥಿನಿ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಪದವಿ ಕಾಲೇಜು ಪ್ರಾಂಶುಪಾಲ ಸಂಶೀರ್ ಧನ್ಯವಾದವಿತ್ತರು.