ಮಂಗಳೂರು: ಕಾಲದ ಬೇಡಿಕೆಯ ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್ ದೇರಳಕಟ್ಟೆಯಲ್ಲಿ ಆಗಸ್ಟ್ 9ರಂದು ಸಂಜೆ 4ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅಲ್ ಸಲಾಮ ಫೌಂಡೇಶನ್ ಅಧ್ಯಕ್ಷ ನಿವೃತ ಡಿ.ಸಿ.ಪಿ ಜಿ ಏ ಬಾವಾ ತಿಳಿಸಿದ್ದಾರೆ.
ಡ್ರಗ್ಸ್ ಬಳಕೆಯಿಂದ ಮುಕ್ತಿ ಹೊಂದಲು, ಅತಿಯಾದ ಮೊಬೈಲ್ ಬಳಕೆ, ಖಿನ್ನತೆಗೆ ಒಳಗಾದವರು, ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿದ ಕಾರ್ಯಗಳಿಗೆ ಕೌನ್ಸಿಲಿಂಗ್ ಹಾಗೂ ತರಬೇತಿ ಕಾರ್ಯಗಾರ ನಡೆಯಲಿರುವ ಕಚೇರಿಯಾಗಿರುತ್ತದೆ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 9ರಂದು ಶನಿವಾರ ಸಂಜೆ 4ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸ್ಪೀಕರ್ ಯು ಟಿ ಖಾದರ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








Good Job.. ಈ ರೀತಿಯ ಒಂದು ಕೌನ್ಸಿಲಿಂಗ್ ಸೆಂಟರ್ ಕಾಲದ ಬೇಡಿಕೆ ಆಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ತುಂಬಾ ಅಗತ್ಯ ಇರುವ ಸ್ಥಳದಲ್ಲೇ ಸ್ಥಾಪನೆ ಆಗಿದೆ ಎಂಬುದು ಉಲ್ಲೇಖನೀಯ. ಡ್ರಗ್ಸ್ ಮಾಫಿಯಾ ಇಲ್ಲಿ ತುಂಬಾ ಆಳವಾಗಿ ಬೇರೂರಿದೆ ಎಂದರೆ ತಪ್ಪಾಗಲಾರದು. ಸಮುದಾಯದ ಯುವ ಮಸ್ತಿಷ್ಕವನ್ನು ನುಚ್ಚು ನೂರು ಮಾಡಲು ಪಣ ತೊಟ್ಟಂತೆ ಹಾರಾಡುವ ಈ ಮಾಫಿಯಾದ ಕಪಿ ಮುಷ್ಠಿಯಿಂದ ನಮ್ಮ ಮಕ್ಕಳನ್ನು ರಕ್ಷಣೆ ಮಾಡುವುದು ಸಮುದಾಯದ ಎಲ್ಲರ ಜವಾಬ್ದಾರಿ ಆಗಿದೆ.