ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲೆಯ 2024-2027 ರ ಅವಧಿಯ ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಉಪಾಧ್ಯಕ್ಷರಾಗಿ ಖಾಸೀಮ್ ರಬ್ಬಾನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಅಕ್ಬರ್ ಅಲಿ ಮತ್ತು ರಫೀಕ್ ಮೇದೂರು ಕಾರ್ಯದರ್ಶಿಗಳಾಗಿ ಯಾಸಿರ್ ಇರ್ಷಾದ್ ಮತ್ತು ಮುಬಾರಕ್ ಕಚವಿ ಕೋಶಾಧಿಕಾರಿಯಾಗಿ ಜಬಿವುಲ್ಲಾ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಸವುದ್ ಮೇದೂರು, ನೂರುಲ್ಲಾ ಮಕಾಂದಾರ, ಸದ್ದಾಂ ಹುಸೇನ್, ಸಲ್ಮಾನ್ ಖತೀಬ್, ರವರು ಆಯ್ಕೆಯಾದರು.
ಹಾವೇರಿ ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ರವರು ನಡೆಸಿಕೊಟ್ಟರು.
ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ರವರು ಕರ್ನಾಟಕ ಸರ್ಕಾರದ ತೀರ್ಮಾನಗಳಲ್ಲಿ ಯು-ಟರ್ನ್ ತೆಗೆದುಕೊಂಡಿರುವುದನ್ನು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿರುವುದನ್ನು ನಿಲ್ಲಿಸಬೇಕು ಇದರಲ್ಲಿ ಗುಂಪು ಹತ್ಯೆ, ಮಸೀದಿ ಧ್ವಂಸ ಮತ್ತು ದಲಿತರ ಹಾಗೂ ಚರ್ಚುಗಳ ಮೇಲೆ ದಾಳಿಗಳನ್ನು ಖಂಡಿಸಿದರು. ಜನರು ಸಿಎಎ ಮತ್ತು ಎನ್‌ಆರ್‌ಸಿ ಯಂತಹ ಕಾನೂನುಗಳಿಗೆ ಧೈರ್ಯವಾಗಿ ವಿರೋಧ ವ್ಯಕ್ತಪಡಿಸಿರುವುದನ್ನು ಮೆಚ್ಚಿದರು ಮತ್ತು ನಾಯಕರು ಹಾಗೂ ಬೆಂಬಲಿಗರು ಮಾಡಿದ ತ್ಯಾಗಗಳನ್ನು ಸ್ಮರಿಸಿದರು “ನಮ್ಮ ಪಕ್ಷ ಸಾಮಾನ್ಯ ಜನರಿಂದ ದೊರೆಯುವ ದೇಣಿಗೆಯ ಮೇಲೆ ನಡೆಯುತ್ತದೆ, ಇದು ನಮ್ಮ ಪಕ್ಷದ ಮೇಲಿನ ಅವರ ನಂಬಿಕೆಯನ್ನು ತೋರಿಸುತ್ತದೆ,” ಎಂದು ಅವರು ಹೇಳುತ್ತಾ ಈ ಸಂದರ್ಭದಲ್ಲಿ ಮಹಿಳೆ ಯೊಬ್ಬರು ತಮ್ಮ ಕಿವಿಯ ಭೂಷಣಗಳನ್ನು ದೇಣಿಗೆಯಾಗಿ ನೀಡಿದ ಮತ್ತು ಬಾಲಕನೊಬ್ಬನು ತನ್ನ ಉಳಿತಾಯವನ್ನು ಪಕ್ಷಕ್ಕೆ ನೀಡಿದ ಉದಾಹರಣೆಗಳನ್ನು ಅವರು ಹಂಚಿಕೊಂಡರು.ಯಶಸ್ಸು ತ್ಯಾಗದ ಮೂಲಕವೇ ಸಾಧ್ಯ. ನಾವು ಭಯವಿಲ್ಲದೆ ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರಿಸ ಬೇಕು ಎಂದು ಮಜೀದ್ ತುಂಬೆ ಕರೆ ನೀಡಿದರು.
















ಇನ್ನಷ್ಟು ಸುದ್ದಿಗಳು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಅಜಿಲಮೊಗರು ಹೋಗುವ ರಸ್ತೆಯಲ್ಲಿ ರಾತ್ರಿ ಕಂಡುಬಂದ ಯಮರಕ್ಕಸ,ಭಯಭೀತರಾದ ಕಾರುಚಾಲಕರು: ವೈರಲ್ ಫೇಕ್ ಹರಡಿದ ವಿಘ್ನ ಸಂತೋಷಿಗಳು
ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್- ನೂತನ ಕಟ್ಟಡ ನಾಳೆ ಉದ್ಘಾಟನೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ತಕ್ಷಣ ರಾಪಿಡ್ ಟೆಸ್ಟ್ಗೆ ಕರ್ನಾಟಕ ಮುಸ್ಲಿಂ ಜಮಾಅತ್,ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಹುಬ್ಬುಲ್ ಹಬೀಬ್ ﷺ ಆನ್ಲೈನ್ ಆತ್ಮೀಯ ಮಜ್ಲಿಸ್ ನಾಳೆಯಿಂದ ಪ್ರಾರಂಭ
ಸುಳ್ಯದಿಂದ ಮಂಗಳೂರಿಗೆ ರೈತರ ಜಾಥಾ: ಸ್ವಾಗತಿಸಲು ಸ್ವಾಗತ ಸಮಿತಿ ರಚನೆ
ಅ.29ಕ್ಕೆ ಈದ್ ಮಿಲಾದ್ ಆಚರಣೆ- ಖಾಝಿ ಖುರ್ರತುಸ್ಸಾದಾತ್ ಮತ್ತು ಝೈನುಲ್ ಉಲಮಾ ಘೋಷಣೆ
ಉಡುಪಿ ಜಿಲ್ಲಾ ಸಂಯುಕ್ತ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ
ರೈತ ಮತ್ತು ಕಾರ್ಮಿಕ ವಿರೋಧಿ ಮಸೂದೆ ವಿರುದ್ಧ ಎಸ್ಡಿಪಿಐ ವ್ಯಾಪಕ ಪ್ರತಿಭಟನೆ
ಹಿರಿಯ ವಿದ್ವಾಂಸ,ಕರ್ಮ ಶಾಸ್ತ್ರಜ್ಞ ಬೇಕಲ್ ಉಸ್ತಾದ್ ನಿಧನ: ಪಿಎಫ್ಐ ಜಿಲ್ಲಾ ಸಮಿತಿ ಸಂತಾಪ