ಬಂಟ್ವಾಳ:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ಬಂಟ್ವಾಳ ಝೋನ್ ವತಿಯಿಂದ ತಹ್ ರೀಕ್ ಲೀಡರ್ಸ್ ಕ್ಯಾಂಪ್ ಹಾಗೂ ಖುರ್ರತುಸ್ಸಾದಾತ್ ತಂಙಳ್ ಅನುಸ್ಮರಣೆ (2024 ಜುಲೈ 21 ಆದಿತ್ಯವಾರ) ನಾಳೆ ಮದ್ಯಾಹ್ನ 2:30 ಕ್ಕೆ ಸಾಲೆತ್ತೂರು ಸೌಹಾರ್ದ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಹ್ಮೂದ್ ಸಅದಿ ಕುಕ್ಕಾಜೆ ಅಧ್ಯಕ್ಷತೆ ನೀಡಲಿದ್ದಾರೆ.
ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಳ್ ಹರ್,
ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ,ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.