ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಕೌನ್ಸಿಲ್ ಮೇ 26ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಡಿವಿಷನ್ ಅಧ್ಯಕ್ಷ ಸಬಾಹ್ ಸಖಾಫಿ ಅಲ್ ಹಿಮಮಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಫಿನಾನ್ಸ್ ಕಾರ್ಯದರ್ಶಿ ನೌಶಾದ್ ಕೆರೆಮೂಲೆ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷ ಜಿ.ಕೆ ಇಬ್ರಾಹೀಂ ಅಂಜದಿ ಮಂಡೆಕೋಲು ಶುಭಹಾರೈಸಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಕಡಬ ಸಂಘಟನಾ ತರಬೇತಿ ಶಿಬಿರಕ್ಕೆ ನೇತೃತ್ವ ನೀಡಿದರು.ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ಒಂದು ವರ್ಷದ ಕಾರ್ಯಾಯೋಜನೆಗಳ ವಿವರಗಳನ್ನು ಮಂಡಿಸಲಾಯಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರಧಾನ ಕಾರ್ಯದರ್ಶಿ ನಿಯಾಝ್ ಎಲಿಮಲೆ ವಾರ್ಷಿಕ ವರದಿ ಮತ್ತು ಫಿನಾನ್ಸ್ ಕಾರ್ಯದರ್ಶಿ ಸಿದ್ದೀಖ್ ಹಿಮಮಿ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಎಕ್ಸಿಕುಟೀವ್ ಇಕ್ಬಾಲ್ ನೀರಕಟ್ಟೆ ವೀಕ್ಷಕರಾಗಿದ್ದರು. ವರದಿ ಮತ್ತು ಲೆಕ್ಕ ಪತ್ರ ಅಂಗೀಕರಿಸಿ ಪ್ರಸ್ತುತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷ ಫೈಝಲ್ ಝುಹ್ರಿ ಮುಖ್ಯ ಅತಿಥಿಯಾಗಿದ್ದರು.ನೂತನ ಸಮಿತಿ : ಸಿದ್ದೀಖ್ ಹಿಮಮಿ ಸಖಾಫಿ ಪೈಂಬಚ್ಚಾಲ್ (ಅಧ್ಯಕ್ಷ) ಕಬೀರ್ ಜಟ್ಟಿಪಳ್ಳ (ಪ್ರ. ಕಾರ್ಯದರ್ಶಿ) ಶರೀಫ್ ಮೊಗರ್ಪಣೆ (ಫಿನಾನ್ಸ್ ಕಾರ್ಯದರ್ಶಿ) ಸ್ವಾದಿಖ್ ಮಾಸ್ಟರ್ (ಕ್ಯಾಂಪಸ್ ಕಾರ್ಯದರ್ಶಿ) ನಿಯಾಝ್ ಎಲಿಮಲೆ (ಕ್ಯೂ.ಡಿ ಕಾರ್ಯದರ್ಶಿ) ರಿಯಾನ್ ಸಅದಿ (ಸಿ.ಸಿ ಕಾರ್ಯದರ್ಶಿ) ಸಾಬಿತ್ ಹಿಕಮಿ (ಮೀಡಿಯಾ ಕಾರ್ಯದರ್ಶಿ) ಕಬೀರ್ ಹಿಮಮಿ (ದಅವಾ ಕಾರ್ಯದರ್ಶಿ) ನೌಶಾದ್ ಅಹ್ಸನಿ (ರೈಂಬೋ ಕಾರ್ಯದರ್ಶಿ) ಅಝೀಝ್ ಮಾಸ್ಟರ್ (ವಿಸ್ಡಂ ಕಾರ್ಯದರ್ಶಿ) ಬಶೀರ್ ಕಲ್ಲುಮುಟ್ಲು (ರೀಡ್ ಪ್ಲಸ್ ಕಾರ್ಯದರ್ಶಿ) ಸಬಾಹ್ ಹಿಮಮಿ ಸಖಾಫಿ, ಸಿದ್ದೀಖ್ ಎಲಿಮಲೆ, ಆಬಿದ್ ಕಲ್ಲುಮುಟ್ಲು, ಶಿಹಾಬ್ ಫಾಳಿಲಿ, ರಹೀಂ ಹಿಮಮಿ, ಇರ್ಶಾದ್ ಸಅದಿ, ಇರ್ಫಾನ್ ಏಣಾವರ, ಮುಝಮ್ಮಿಲ್ ಇಂದ್ರಾಜೆ (ಸದಸ್ಯರು).
ಸ್ವಾದಿಖ್ ಮಾಸ್ಟರ್ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ವಂದಿಸಿದರು.