ದುಬೈ: ಉದ್ಯಮದ ಲೈಸೆನ್ಸ್ ನವೀಕರಿಸದವರಿಗೆ ದುಬೈ ಆರ್ಥಿಕ ಇಲಾಖೆಯು ಕಂಪೆನಿಗಳಿಗೆ ವಿಧಿಸಿದ ದಂಡ ಪಾವತಿಯಲ್ಲಿ ವಿನಾಯಿತಿ ನೀಡಿದೆ.ಡಿಸೆಂಬರ್‌ಗೆ ಮುಂಚಿತವಾಗಿ ದಂಡ ಪಾವತಿಸದೆ ಲೈಸೆನ್ಸ್ ನವೀಕರಿಸಬಹುದು.
ಕಂಪನಿ ಲೈಸೆನ್ಸ್ ನವೀಕರಿಸದ ಕಾರಣ ಪರದಾಡುಡುವ ವ್ಯಾಪಾರಿಗಳಿಗೆ ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಷೀದ್ ಆಲ್ ಮಖ್ತೂಂ ಅವರ ಆದೇಶವು ತುಂಬಾ ಆಶಾದಾಯಕವಾಗಿದೆ.
ರಾಷ್ಟ್ರಪಿತ ಶೈಖ್ ಝಾಯಿದ್ ಆಲ್ ನಹ್ಯಾನ್ ಅವರ ವರ್ಷಾಚರಣೆಯ ಭಾಗವಾಗಿ ಈ ವಿನಾಯತಿಯನ್ನು ನೀಡಿದ್ದಾರೆ.
ಎಲ್ಲರೂ ಈ ಸೌಲಭ್ಯವನ್ನು ಬಳಸಬೇಕು ಮತ್ತು ಅತ್ಯಂತ ಸುಗಮವಾಗಿ ಕೈಗಾರಿಕೆಯನ್ನು ನಡೆಸುವ ಸ್ಥಳ ಎನ್ನುವ ಖ್ಯಾತಿಯನ್ನು ದೃಢಪಡಿಸುವ ಕ್ರಮವಾಗಿ ಇದು ಮಾರ್ಪಡಲಿದೆ ಎಂದು ದುಬೈ ಆರ್ಥಿಕ ನಿರ್ದೇಶಕ ಜನರಲ್ ಸಾಮಿ ಅಲ್ ಖಮ್ಸಿ ಸ್ಪಷ್ಟಪಡಿಸಿದ್ದಾರೆ.
ಆರ್ಥಿಕ ಉದ್ಯಮ ಬೆಳವಣಿಗೆಗೆ ಶಕ್ತಿಯುತವಾದ ತೀರ್ಮಾನ ಇದಾಗಿದೆ ಎಂದು ಡಿಇಡಿ ಲೈಸೆನ್ಸಿಂಗ್ ವಿಭಾಗದ ಸಿ.ಇ.ಓ ಉಮರ್ ಬುಷಾ ಅವರು ಪ್ರತಿಕ್ರಿಯಿಸಿದ್ದಾರೆ.
24 ತಿಂಗಳುಗಳಿಗಿಂತಲೂ ಪರವಾನಗಿಗಳ ಅವಧಿ ಮುಗಿದು, ನವೀಕರಿಸಲು, ಹಿಂಪಡೆಯಲು ಅರ್ಜಿ ಸಲ್ಲಿಸುವ ಸ್ಥಾಪನೆಗಳ ದಂಡ ರದ್ದುಪಡಿಸಲು ಅಬುಧಾಬಿ ಕೂಡ ನಿರ್ಧರಿಸಿದೆ.ಎಮಿರೇಟಿನಲ್ಲಿನ ಉದ್ಯಮದ ವಾತಾವರಣವು ಹೆಚ್ಚು ಪ್ರೋತ್ಸಾಹಕಕರವಾಗಲು ಇದು ಸಹಾಯ ಮಾಡಲಿದೆ ಎಂದು ಅಬುಧಾಬಿ ಡಿಇಡಿ ಆಕ್ಟಿಂಗ್ ಅಂಡರ್ ಕಾರ್ಯದರ್ಶಿ ಹೇಳಿದ್ದಾರೆ.
ಅಜ್ಮಾನ್, ಫುಜೈರಾ ಮುಂತಾದ ಎಮಿರೇಟ್ಸ್ ಈ ಹಿಂದೆಯೇ ಪರವಾನಗಿ ಶುಲ್ಕ ರಿಯಾಯಿತಿಯನ್ನು ಘೋಷಿಸಿದೆ.ಶೈಖ್ ಮುಹಮ್ಮದ್ ರ ಘೋಷಣೆಯು ಸುವರ್ಣಾವಸರವೆಂದು ದೇಶಾದ್ಯಂತ ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ