ರಿಯಾದ್: ಸೌದಿ ರಾಜಧಾನಿಯಲ್ಲಿ ಉದ್ದೇಶಿತ ಕಿಂಗ್ ಸಲ್ಮಾನ್ ಪಾರ್ಕ್ ಯೋಜನೆಯಲ್ಲಿ ನಿರ್ಮಿಸಲಾದ ಅಬೂಬಕರ್ ಅಲ್ ಸಿದ್ದೀಕ್ ಸುರಂಗದಲ್ಲಿ ಸಂಚಾರ ಪ್ರಾರಂಭವಾಗಿದೆ. ಗುರುವಾರ ಬೆಳಗ್ಗೆಯಿಂದಲೇ ವಾಹನಗಳ ಓಡಾಟ ಆರಂಭಗೊಂಡಿದೆ. ಇದು ಮಧ್ಯಪ್ರಾಚ್ಯದಲ್ಲಿ ಅತಿ ಉದ್ದದ ಸುರಂಗವಾಗಿದೆ. ಹಳೆಯ ಸುರಂಗಗಳನ್ನು ಜೋಡಿಸಿ ಹೊಸ ಸುರಂಗವನ್ನು ನಿರ್ಮಿಸಲಾಗಿದೆ. ಪಾರ್ಕ್ ಯೋಜನೆಯಡಿ ಪೂರ್ಣಗೊಂಡ ಮೊದಲ ಸೇತುವೆ ಮತ್ತು ಸುರಂಗ ಇದಾಗಿದೆ. ಇದರ ನಿರ್ಮಾಣವು 2021 ರಲ್ಲಿ ಪ್ರಾರಂಭಗೊಂಡಿತ್ತು.
ಸುರಂಗವು 2,430 ಮೀ ಉದ್ದವಿದ್ದು, ಉದ್ಯಾನದ ಉತ್ತರದಿಂದ ದಕ್ಷಿಣದ ರಸ್ತೆಗೆ ವಿಸ್ತರಿಸಿದೆ. ಇದರಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಭಾಗ 1,590 ಮೀ. ಉಳಿದ 840 ಮೀಟರ್ ಭಾಗವು ಅಬೂ ಬಕರ್ ಅಲ್ ಸಿದ್ದೀಕ್ ರಸ್ತೆಯಲ್ಲಿ ಅಸ್ತಿತ್ವದಲ್ಲಿರುವ ಸುರಂಗದಿಂದ ಬಂದಿದೆ. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಎರಡನ್ನೂ ಒಂದೇ ಸುರಂಗವನ್ನಾಗಿ ಮಾಡಲಾಗಿದೆ.
ಮಧ್ಯಪ್ರಾಚ್ಯ ಉದ್ದದ ಸುರಂಗವನ್ನು ರಿಯಾದ್ನಲ್ಲಿ ತೆರೆಯಲಾಗಿದೆ. ಸಲ್ಮಾನಿಯಾ ವಾಸ್ತುಶಿಲ್ಪವನ್ನು ನಿರ್ಮಾಣದಲ್ಲಿ ಬಳಸಲಾಗಿದೆ. ಒಳಾಂಗಣ ವಿನ್ಯಾಸವು ರಿಯಾದ್ ನಗರದ ಕಲ್ಲಿನ ಮತ್ತು ಭೂವೈಜ್ಞಾನಿಕ ರಚನೆಯನ್ನು ಅನುಕರಿಸುತ್ತದೆ. ಗುರುವಾರದಿಂದ ಸುರಂಗ ಮಾರ್ಗದ ಮೂಲಕ ವಾಹನಗಳು ಸಂಚರಿಸಬಹುದಾಗಿದೆ ಎಂದು ಕಿಂಗ್ ಸಲ್ಮಾನ್ ಪಾರ್ಕ್ ಫೌಂಡೇಶನ್ ಆಡಳಿತ ಮಂಡಳಿ ತಿಳಿಸಿತ್ತು. ಸುರಂಗವು ಕಣ್ಣಿಗೆ ಕಟ್ಟುವಂತೆ ಆಧುನಿಕ ವಿನ್ಯಾಸ, ಸ್ಥಳೀಯ ಪರಿಸರಕ್ಕೆ ಹೊಂದಿಕೆಯಾಗುವ ಬಣ್ಣಗಳು ಮತ್ತು ಸುಸ್ಥಿರತೆಯ ಗುರಿಗಳನ್ನು ಪೂರೈಸುವ ವಸ್ತುಗಳನ್ನು ಒಳಗೊಂಡಿದೆ.
















ಇನ್ನಷ್ಟು ಸುದ್ದಿಗಳು
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ
ರಿಯಾದ್ ವಿಮಾನ ನಿಲ್ದಾಣ ದಾಳಿ: ಗಾಯಗೊಂಡವರಲ್ಲಿ 11 ಮಂದಿ ಭಾರತೀಯರು- ಭಾರತೀಯ ರಾಯಭಾರ ಕಚೇರಿ
ಡಿ.ಕೆ. ಎಸ್. ಸಿ. ದ . ಕ. ಜಿಲ್ಲಾ ಸಮಿತಿ ಅಧೀನ ನೂತನ ಸುರತ್ಕಲ್ ಘಟಕದ ಉದ್ಘಾಟನೆ