ಮಸ್ಕತ್: ಒಮಾನ್ಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂದು ಹರಡಿರುವ ಸುದ್ದಿ ನಿರಾಧಾರ ಎಂದು ರಾಯಲ್ ಒಮಾನ್ ಪೊಲೀಸರು ಹೇಳಿದ್ದಾರೆ. ಒಮಾನ್ನ ವೀಸಾ ನೀತಿಯಲ್ಲಿ ಇತ್ತೀಚೆಗೆ ಯಾವುದೇ ಬದಲಾವಣೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ, ಒಮಾನ್ ಮತ್ತು ಕತಾರ್ಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು. ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಈಗ ಒಮಾನ್ ಮತ್ತು ಕತಾರ್ಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು. ಕೆಲವು ಆನ್ಲೈನ್ ಪೋರ್ಟಲ್ಗಳು ಭಾರತೀಯರು ವೀಸಾ ಇಲ್ಲದೆ ಅಥವಾ ಆನ್-ಅರೈವಲ್ ವೀಸಾ ಮೂಲಕ ಪ್ರಯಾಣಿಸಬಹುದಾದ ಇತರ 62 ದೇಶಗಳಲ್ಲಿ ಕೇವಲ ಎರಡು ಜಿಸಿಸಿ ದೇಶಗಳು ಮಾತ್ರ ಇವೆ ಎಂಬ ಸುದ್ದಿಯನ್ನು ಪ್ರಕಟಿಸಿತ್ತು.
ಇಂತಹ ವರದಿಗಳು ಅಥವಾ ಪ್ರಕಟಣೆಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ರಾಯಲ್ ಒಮಾನ್ ಪೊಲೀಸ್ ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಮೇಜರ್ ಮುಹಮ್ಮದ್ ಅಲ್ ಹಶ್ಮಿ ಹೇಳಿದ್ದಾರೆ. ಯುಎಸ್ಎ, ಕೆನಡಾ ಮತ್ತು ಯುರೋಪ್ ವೀಸಾ ಹೊಂದಿರುವ ಭಾರತೀಯರು ಆನ್ ಅರೈವಲ್ ವೀಸಾ ಪಡೆಯಬಹುದು. ಯುರೋಪಿಯನ್, ಅಮೇರಿಕನ್ ಮತ್ತು ಕೆನಡಾದ ನಿವಾಸ ವೀಸಾಗಳನ್ನು ಹೊಂದಿರುವ ಭಾರತೀಯರು ಒಮಾನ್ನಲ್ಲಿ 14 ದಿನಗಳ ವಾಸ್ತವ್ಯಕ್ಕಾಗಿ ವೀಸಾ ಮುಕ್ತವಾಗಿ ಒಮಾನ್ಗೆ ಪ್ರವೇಶಿಸಬಹುದು ಎಂದು ಅಲ್ ಹಶ್ಮಿ ಹೇಳಿದರು. ಆಗಮನದ ನಂತರ ಅವರಿಗೆ ತ್ವರಿತವಾಗಿ ವೀಸಾ ಲಭಿಸಲಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ