ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಕೊಡಗು ಜಿಲ್ಲಾ ಸಮಿತಿಯ ಮಹಾಸಭೆಯು ಇತ್ತೀಚೆಗೆ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ (ಕಿಲ್ಲೂರು ತಂಙಳ್) ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಪ್ರಧಾನ ಕಾರ್ಯದರ್ಶಿ ಅಹ್ಸನಿ ಉಸ್ತಾದರು ಉದ್ಘಾಟಿಸಿದರು. ಸಭೆಯಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಹಫೀಳ್ ಸಅದಿ, ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಝುಬೈರ್ ಸಅದಿ ಉಪಸ್ಥಿತರಿದ್ದರು.
ನೂತನ ಸಮಿತಿ ರಚನೆಯ ಉಸ್ತುವಾರಿಯಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಉಪಾಧ್ಯಕ್ಷ ರಾದ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಹಾಗೂ ವೀಕ್ಷಕರಿಗಿ ಹಮೀದ್ ಬಜ್ಪೆ ಆಗಮಿಸಿದ್ದರು.
ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಪಿ.ಎಂ.ಅಬ್ದುಲ್ಲತೀಫ್ ಸುಂಠಿಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾಜಿ ಕುಂಜಿಲ, ಕೋಶಾಧಿಕಾರಿಯಾಗಿ ಖಾಲಿದ್ ಫೈಝಿ ಅಂಬಾಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರು: ಅಬ್ದುಲ್ಲಾಹ್ ಸಖಾಫಿ, ಲತೀಫಾ ಉಸ್ತಾದ್, ಬಾವಾ ನೆಲ್ಲಿಹುದಿಕೇರಿ, ಸಿ. ಕೆ. ಅಹ್ಮದ್ ಹಾಜಿ.
ಕಾರ್ಯದರ್ಶಿಗಳು: ಹನೀಫ್ ಸಖಾಫಿ, ಅಡ್ವಕೇಟ್ ಕುಞ್ಞಬ್ದುಲ್ಲಾಹ್, ನೌಫಲ್ ಸಿದ್ದಾಪುರ, ಅಬ್ದುಲ್ ಖಾದರ್ ಕಲ್ಲಬನ, ಮೊಯ್ದಿನ್ ವಿ. ಪಿ, ಹಂಝ ಮುಂತಾದವರನ್ನು ಆರಿಸಲಾಗಿದೆ.