ಸಿದ್ದಾಪುರ: ಸಹಬಾಳ್ವೆಯ ಪರಂಪರೆಯನ್ನು ಹೊಂದಿದ ಭಾರತದ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು, ಅತಿ ಪುರಾತನ ಈ ಪರಂಪರೆಯ ಬಗ್ಗೆ ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕೆಂದು ಡಾ. ಝೈನಿ ಕಾಮಿಲ್ ಕಕ್ಕಿಂಜೆಯವರು ಕರೆ ನೀಡಿದರು.
ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಘೋಷಣೆಯೊಂದಿಗೆ ನವೆಂಬರ್ 17 ರಂದು ಸಿದ್ಧಾಪುರ ಬಸ್ ನಿಲ್ದಾಣದ ಬಳಿ ನಡೆದ SYS ಕೊಡಗು ಜಿಲ್ಲಾ ಯುವಜನೋತ್ಸವದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು ಧರ್ಮಗಳೆಲ್ಲವೂ ಸಾರುವ ಸಂದೇಶ ಸುಸ್ಥಿರವಾದ ಸಮಾಜ ನಿರ್ಮಾಣವಾಗಿದೆ ಎಂದರು.
SYS ಜಿಲ್ಲಾಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ಕೊಳಕೇರಿಯವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಹಫೀಳ್ ಸಅದಿಯವರು ಸಭೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಐದರೂಸಿ (ಕಿಲ್ಲೂರ್ ತಂಙಳ್)ರವರು ದುಆಶೀರ್ವರ್ಚನ ನೀಡಿದರು. ಖ್ಯಾತ ವಾಗ್ಮಿ ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಸಯ್ಯಿದ್ ಫಝಲ್ ಐದರೂಸಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರ.ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಉಸ್ಮಾನ್ ಹಾಜಿ ಯು.ಎ.ಇ., ವಕ್ಫ್ ಬೋರ್ಡ್ ಕೊಡಗು ಜಿಲ್ಲಾ ಅಧ್ಯಕ್ಷ ಹಕೀಂ ಗೋಣಿಕೊಪ್ಪ, ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗ ಕೊಡಗು ಜಿಲ್ಲಾ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ಕಾರ್ಯದರ್ಶಿ ಬಾವ ನೆಲ್ಯಹುದಿಕೇರಿ, ಅಬೂಬಕರ್ ಹಾಜಿ ಹಾಕತ್ತೂರು, ಯೂಸುಫ್ ಹಾಜಿ ಕೊಂಡಂಗೇರಿ, ವಕೀಲರಾದ ಅಬ್ದುಲ್ಲ ಮಡಿಕೇರಿ, ಅಬ್ದುಲ್ಲ ನೆಲ್ಯಹುದಿಕೇರಿ, ಹಮೀದ್ ಕಬಡಕೇರಿ, ಅಬ್ದುರ್ರಹ್ಮಾನ್ ನಾಪೋಕ್ಲು, ಹಂಝ ಸಅದಿ ಹುಂಡಿ, ಮೊಯ್ದೀನ್ ಕುಂಞಿ ಬಾಳುಗೋಡು, ಹನೀಫ್ ಸಖಾಫಿ ಕೊಂಡಂಗೇರಿ, ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಪ್ರ.ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಹೊದ್ದೂರು ಗ್ರಾ.ಪಂ.ಅಧ್ಯಕ್ಷ ಹಂಝ ಕೊಟ್ಟಮುಡಿ, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷ ಹನೀಫ್, ನಾಪೋಕ್ಲು ಗ್ರಾ.ಪಂ. ಸದಸ್ಯ ಇಸ್ಮಾಯಿಲ್, ಅಲಿ ಗುಂಡಿಕೆರೆ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಅಹ್ಮದ್ ಮದನಿ ಗುಂಡಿಕೆರೆ ಸ್ವಾಗತಿಸಿ ಯಾಕೂಬ್ ಕೊಳಕೇರಿ ವಂದಿಸಿದರು. ಶಾಫಿ ಸಅದಿ ಸೋಮವಾರಪೇಟೆ ಕಾರ್ಯಕ್ರಮ ನಿರೂಪಿಸಿದರು.